ಸೋಮವಾರ, ಡಿಸೆಂಬರ್ 9, 2019
22 °C

ಅಧ್ಯಾತ್ಮ ಮಾರ್ಗದರ್ಶಕಿಯನ್ನು ಮೂರನೇ ಮದುವೆಯಾದ ಇಮ್ರಾನ್‌ ಖಾನ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಅಧ್ಯಾತ್ಮ ಮಾರ್ಗದರ್ಶಕಿಯನ್ನು ಮೂರನೇ ಮದುವೆಯಾದ ಇಮ್ರಾನ್‌ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನ್‌ ತೆಹ್ರಿಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಲಾಹೋರ್‌ನಲ್ಲಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಅಧ್ಯಾತ್ಮಿಕ ಮಾರ್ಗದರ್ಶಕಿ ಬುಶ್ರಾ ಮನೇಕಾ ಅವರನ್ನು ಮೂರನೇ ಮದುವೆ ಮಾಡಿಕೊಂಡಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಜನವರಿ 1ರಂದು ರಾತ್ರಿ ಮದುವೆ ಮಾಡಿಕೊಳ್ಳುವ ಮೂಲಕ 2018ರ ಹೊಸ ವರ್ಷವನ್ನು ಇಮ್ರಾನ್ ಖಾನ್ ಲಾಹೋರ್‌ನಲ್ಲಿ ಸ್ವಾಗತಿಸಿದ್ದಾರೆ ಎನ್ನಲಾಗಿದೆ.

ಪಿಟಿಐ ಕೋರ್ ಸಮಿತಿ ಸದಸ್ಯ ಮುಫ್ತಿ ಸಯೀದ್ ಮದುವೆ ನೆರವೇರಿಸಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

ಇಮ್ರಾನ್‌ ಖಾನ್‌ 1995ರ ಮೇ 16ರಂದು ಜೆಮಿಮಾ ಗೋಲ್ಡ್‌ಸ್ಮಿತ್‌ ಅವರನ್ನು ಮದುವೆಯಾಗಿದ್ದರು. 2004ರಲ್ಲಿ ವಿಚ್ಛೇದನ ಪಡೆದಿದ್ದರು. ನಂತರ ರೆಹಂ ಖಾನ್‌ ಅವರನ್ನು ಮದುವೆಯಾಗಿದ್ದು. ಅದು ಹತ್ತೇ ತಿಂಗಳಲ್ಲಿ ಮುರಿದುಬಿದ್ದಿತ್ತು.

ಇದೀಗ ಇಮ್ರಾನ್‌ ಖಾನ್‌ ಮದುವೆ ಸಂಗತಿಯನ್ನು ಪಿಟಿಐ ಪಕ್ಷದ ವಕ್ತಾರ ಫವಾದ್ ಚೌಧರಿ ಖಚಿತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)