ವಿದ್ಯುತ್‌ ರೈಲಿಗೆ ಮೋದಿ ಚಾಲನೆ

7

ವಿದ್ಯುತ್‌ ರೈಲಿಗೆ ಮೋದಿ ಚಾಲನೆ

Published:
Updated:

ಮೈಸೂರು: ಮೈಸೂರು– ಬೆಂಗಳೂರು ನಡುವೆ ಸಂಚರಿಸಲಿರುವ ವಿದ್ಯುತ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಮಧ್ಯಾಹ್ನ 3ಕ್ಕೆ ಮೈಸೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ.

ಜೋಡಿ ರೈಲು ಮಾರ್ಗ ನಿರ್ಮಾಣದ ನಂತರ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದರೂ ಉದ್ಘಾಟನೆ ಭಾಗ್ಯ ಕಂಡಿರಲಿಲ್ಲ. ಈಗ ಅದಕ್ಕೆ ಮುಹೂರ್ತ ಕೂಡಿ ಬಂದಿದೆ.

ಮೈಸೂರು– ಬೆಂಗಳೂರು ನಡುವೆ ಪ್ರತಿನಿತ್ಯ ಡೀಸೆಲ್‌ ಎಂಜಿನ್‌ ಹೊಂದಿರುವ 24 ರೈಲುಗಳು ಸಂಚರಿಸುತ್ತಿವೆ. ವಿದ್ಯುತ್‌ ಎಂಜಿನ್‌ ಬಳಕೆಯಾದರೆ ದಿನಕ್ಕೆ ₹ 10 ಲಕ್ಷದಂತೆ ತಿಂಗಳಿಗೆ ₹ 3 ಕೋಟಿ ಉಳಿತಾಯವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry