ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಟೋಮ್ಯಾಕ್ ಸಂಸ್ಥೆ ಮುಖ್ಯಸ್ಥ ವಿಕ್ರಮ್‌ ಕೊಠಾರಿ ಮನೆ, ಕಚೇರಿ ಮೇಲೆ ಸಿಬಿಐ ದಾಳಿ: ಬಂಧನ

Last Updated 19 ಫೆಬ್ರುವರಿ 2018, 9:09 IST
ಅಕ್ಷರ ಗಾತ್ರ

ಕಾನ್ಪುರ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ(ಪಿಎನ್‌ಬಿ) ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಅವರು ₹11,400 ಕೋಟಿ ವಂಚನೆ ಮಾಡಿದ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.

ರೋಟೋಮ್ಯಾಕ್ ಪೇನ್ ಸಂಸ್ಥೆ ಮುಖ್ಯಸ್ಥ ವಿಕ್ರಮ್‌ ಕೊಠಾರಿ ಅವರ ವಿರುದ್ಧ ಸಾಲ ನೀಡಿರುವ ಐದು ಬ್ಯಾಂಕ್‌ಗಳ ಅಧಿಕಾರಿಗಳು ಭಾನುವಾರ ಸಿಬಿಐಗೆ ದೂರು ನೀಡಿದ್ದು, ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡಿದೆ.

ಸಿಬಿಐ ಅಧಿಕಾರಿಗಳು ಸೋಮವಾರ ಬೆಳಿಗ್ಗೆ ಕೊಠಾರಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.

ವಿಕ್ರಮ್‌ ಅವರು ವಿವಿಧ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಂದ ₹800 ಕೋಟಿ ಸಾಲ ಪಡೆದಿದ್ದು, ವಂಚಿಸಿರುವ ಆರೋಪ ಕೇಳಿ ಬಂದಿದೆ.

ಅಲಹಾಬಾದ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಇಂಡಿಯಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ಗಳಿಂದ ಕೊಠಾರಿ ₹800 ಕೋಟಿ ಸಾಲ ಪಡೆದಿದ್ದಾರೆ.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಕೊಠಾರಿ ₹485 ಕೋಟಿ ಸಾಲಪಡೆದಿದ್ದು, ಅಲಹಾಬಾದ್‌ ಬ್ಯಾಂಕ್‌ನಿಂದ ₹352 ಕೋಟಿ ಮತ್ತು ಇತರೆ 3 ಬ್ಯಾಂಕ್‌ಗಳಿಂದಲೂ ಸಾಲ ಪಡೆದಿದ್ದಾರೆ ಎಂದು ಹೇಳಲಾಗಿದೆ.

ಕಾನ್ಪುರದಲ್ಲಿ ಕೊಠಾರಿ ಅವರ ಕಚೇರಿ ಇದ್ದು, ಕಳೆದ ಒಂದು ವಾರದಿಂದ ಕಚೇರಿಗೆ ಬೀಗ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT