ಛತ್ರಪತಿ ಶಿವಾಜಿ, ಶೋಭಾಯಾತ್ರೆ

7

ಛತ್ರಪತಿ ಶಿವಾಜಿ, ಶೋಭಾಯಾತ್ರೆ

Published:
Updated:

ಮುನವಳ್ಳಿ: ಪಟ್ಟಣದ ಕರ್ನಾಟಕ ಶಿವಸೇನಾ ವತಿಯಿಂದ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ  ಶೋಭಾಯಾತ್ರೆ ನಡೆಯಿತು.

ಶಾಸಕ ಆನಂದ ಮಾಮನಿ ಅವರು ಶೋಭಾಯಾತ್ರೆಗೆ ಚಾಲನೆ ನೀಡಿ, ದೇಶಭಕ್ತ, ಇತಿಹಾಸ ಪುರುಷರ ತತ್ವಗಳನ್ನು ಅರಿತು ನಡೆಯಲು ತಿಳಿಸಿದರು. ಸಾಯಿಬಾಬಾ ಮಂದಿರದಿಂದ ಹೊರಟ ಶೋಭಾಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಯ್ದು ಸೂಲಕಟ್ಟಿ ಆಗಸಿ ಓಣಿಯವರೆಗೆ ಜರುಗಿತು. ಮೆರವಣಿಗೆಯಲ್ಲಿ ಮಹಾರಾಷ್ಟ್ರದ 60 ಕಲಾವಿದರ ನಾಸಿಕ್‌ ಡೋಲ್‌ ವಾದ್ಯ ಪ್ರಮುಖ ಆಕರ್ಷಣೆಯಾಗಿತ್ತು. ದಾರಿಯುದ್ದಕ್ಕೂ ಕೇಸರಿ ಧ್ವಜ ಹಿಡಿದ ಯುವಕರು ಶಿವಾಜಿ ಮಹಾರಾಜರಿಗೆ ಜೈಕಾರ ಕೂಗಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry