ಬುಧವಾರ, ಡಿಸೆಂಬರ್ 11, 2019
20 °C

ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗಕ್ಕೆ ಪ್ರಧಾನಿ ಮೋದಿ ಚಾಲನೆ

ಶ್ರವಣಬೆಳಗೊಳ/ಮೈಸೂರು: ಸಂತರು ಹಾಗೂ ಮುನಿಗಳು ಸದಾ ಸಮಾಜಕ್ಕಾಗಿ ಸೇವೆ ಸಲ್ಲಿಸಿದ್ದು, ಧನಾತ್ಮಕ ಬದಲಾವಣೆಗೆ ಕಾರಣರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶ್ರವಣಬೆಳಗೊಳದ  ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಭಾಗಿಯಾಗಿ ಮಾತನಾಡಿದರು.

ಎದುರಾಗುವ ಸಂದರ್ಭಕ್ಕೆ ಅನುಸಾರವಾಗಿ ನಮ್ಮ ಸಮಾಜ ಸೂಕ್ತ ಬದಲಾವಣೆಯನ್ನು ಕಾಣುತ್ತ ಬಂದಿದೆ. 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ದೊರೆತಿರುವುದು ನನ್ನ ಭಾಗ್ಯ ಎಂದರು.

ಕಳೆದ 25 ವರ್ಷಗಳಲ್ಲಿ ಪ್ರಧಾನ ಮಂತ್ರಿಯೊಬ್ಬರು ಶ್ರವಣಬೆಳಗೊಳಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ.

ವಿಂಧ್ಯಗಿರಿಗೆ ಹೊಸದಾಗಿ ನಿರ್ಮಿಸಿರುವ 630 ಮೆಟ್ಟಿಲುಗಳು ಹಾಗೂ ಬಾಹುಬಲಿ ಸಾರ್ವಜನಿಕ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು.

ಮೈಸೂರು–ಉದಯಪುರ ರೈಲು ಸಂಚಾರ:
ಶ್ರವಣಬೆಳಗೊಳದಿಂದ ಮೈಸೂರಿಗೆ ಆಗಮಿಸಿದ ಪ್ರಧಾನಿ, ಇಲ್ಲಿನ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂ 1ರಲ್ಲಿ ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗ ಹಾಗೂ ಮೈಸೂರು–ರಾಜಸ್ತಾನದ ಉದಯಪುರ ನಡುವಣ ‘ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌’ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದರು.

ಪ್ರತಿಕ್ರಿಯಿಸಿ (+)