ಭಾನುವಾರ, ಡಿಸೆಂಬರ್ 8, 2019
24 °C

ದಿಶಾ ವಶದಲ್ಲಿ ‘ಟೈಗರ್‌’

Published:
Updated:
ದಿಶಾ ವಶದಲ್ಲಿ ‘ಟೈಗರ್‌’

ಟೈಗರ್ ಶ್ರಾಫ್ ಚಿತ್ರೀಕರಣ ಹೊರತು ಪಡಿಸಿ ತನ್ನ ಜತೆ ನಟಿಸುತ್ತಿರುವ ನಟಿಯರೊಂದಿಗೆ ಮಾತನಾಡುವಂತಿಲ್ಲ. ಅಪ್ಪತಪ್ಪಿಯೂ ಇನ್‌ಸ್ಟಾಗ್ರಾಂನಲ್ಲಿ ಬೇರೆ ನಟಿ ಜತೆ ಇರುವ ಚಿತ್ರ ಅಪ್‌ಲೋಡ್ ಮಾಡುವಂತಿಲ್ಲ...

ಇದೇನಿದು ಯಾರು ಹೊರಡಿಸಿದ ಫರ್ಮಾನ್‌ ಅಂದ್ರಾ. ಖಂಡಿತಾ ಇಲ್ಲ. ಇವು ದಿಶಾ ಪಟಾನಿ ತನ್ನ ಪ್ರಿಯಕರನಿಗೆ ವಿಧಿಸಿರುವ ನಿರ್ಬಂಧಗಳು.

ಈ ಹಿಂದೆ ದಿಶಾ ಪಟಾನಿ ಜತೆ ತನ್ನ ಮಗ ಟೈಗರ್‌ಗೆ ಯಾವುದೇ ಸಂಬಂಧವಿಲ್ಲ. ಅವರಿಬ್ಬರೂ ಪ್ರೀತಿಸುತ್ತಿಲ್ಲ. ಅವರಿಬ್ಬರೂ ಸ್ನೇಹಿತರು ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಟೈಗರ್ ಅಪ್ಪ ಅಮ್ಮ ಜಾಕಿಶ್ರಾಫ್ ಮತ್ತು ಅಯೇಷಾ ಈಗ ತೆಪ್ಪಗಾಗಿದ್ದಾರೆ. ದಿಶಾಳ ಪ್ರೀತಿಯಲ್ಲಿ ಬಿದ್ದಿರುವ ಮಗ ನನ್ನನ್ನು ಮಾತನಾಡಿಸುವುದಿರಲಿ ತಿರುಗಿಯೂ ನೋಡುತ್ತಿಲ್ಲ ಎಂದು ಅಯೇಷಾ ಅಲವತ್ತುಕೊಂಡಿದ್ದಾರೆ.

ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ದಿಶಾ ಮಾತ್ರ ತನ್ನ ಪ್ರಿಯತಮನ ಮೊಬೈಲ್ ಚೆಕ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರಂತೆ.

ಪ್ರತಿಕ್ರಿಯಿಸಿ (+)