4

ಮನೆಯಲ್ಲೇ ಫಿಟ್‌ನೆಸ್!

Published:
Updated:
ಮನೆಯಲ್ಲೇ ಫಿಟ್‌ನೆಸ್!

ಆಕರ್ಷಕ ದೇಹ, ಕಟ್ಟುಮಸ್ತಾದ ಮೈಕಟ್ಟು ಬಹುತೇಕ ಹುಡುಗರ ಅಚ್ಚುಮೆಚ್ಚು. ಫಿಟ್‌ನೆಸ್ ಕಾಪಾಡಿಕೊಳ್ಳಲು ಬಯಸುವವರು ಜಿಮ್‌ಗಳನ್ನು ಹುಡುಕುವುದು ಸಾಮಾನ್ಯ. ಜಿಮ್‌ಗೆ ಹೋಗಲು ಸಾಧ್ಯವಿಲ್ಲ ಎಂಬುವಂತವರು ಮನೆಯಲ್ಲಿಯೇ ವ್ಯಾಯಾಮ ಮಾಡಬಹುದು.

ಪುಶ್ಅಪ್ಸ್‌, ಸಿಟ್ಅಪ್ಸ್ ದೇಹದ ಫಿಟ್‌ನೆಸ್ ಕಾಪಾಡುವಲ್ಲಿ ಸಹಕಾರಿಯಾಗಿವೆ. ಇದನ್ನು ಮಾಡುವಾಗ ಕೆಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿಯೇ ಅಭ್ಯಾಸ ಮಾಡಿದಲ್ಲಿ ಆಕರ್ಷಕ ಅಂಗಸೌಷ್ಟವ ಪಡೆಯಬಹುದು.

* ವ್ಯಾಯಾಮ ಮಾಡುವಾಗ ಇರಲಿ 10ರಿಂದ 1ರ ಎಣಿಕೆ: ಸಾಮಾನ್ಯವಾಗಿ ವ್ಯಾಯಾಮ ಮಾಡುವಾಗ ಶಕ್ತಿ ಪ್ರದರ್ಶನ ಮಾಡಲು ಹೋಗಬೇಡಿ. ಫುಶ್ ಅಪ್ಸ್‌, ಪುಲ್ ಅಪ್ಸ್, ಸಿಟ್‌ಅಪ್ಸ್‌ ಮಾಡುವಾಗ 10ರಿಂದ 1ಅನ್ನು ಮನಸಿನಲ್ಲೇ ಎಣಿಸಿರಿ. 20 ಸೆಕೆಂಡ್‌ಗಳ ಕಾಲ ವಿಶ್ರಾಂತಿ ಪಡೆದು ಮತ್ತೆ ವ್ಯಾಯಾಮ ಪ್ರಾರಂಭಿಸಿ. ಈ ರೀತಿ ಮಾಡುವುದರಿಂದ ದೇಹದ ಮೇಲೆ ಹಿಡಿತ ಸಾಧಿಸಬಹುದು ಮತ್ತು 

ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬಹುದು.

* ಪ್ರಾಣಿಗಳನ್ನು ಅನುಕರಿಸಿ ಮೋಜಿಗಾಗಿ ವ್ಯಾಯಾಮ ಮಾಡಿ: ಫಿಟ್‌ನೆಸ್ ಕಾಪಾಡುವಾಗ ಮೊದ ಮೊದಲು ಉತ್ಸಾಹದಿಂದ ಇರುವವರು ದಿನದಿಂದ ದಿನಕ್ಕೆ ಉತ್ಸಾಹ ಕಳೆದುಕೊಳ್ಳುತ್ತಾರೆ. ವ್ಯಾಯಾಮವನ್ನು ಆಟವೆಂದು ಪರಿಗಣಿಸಿ. ಖುಷಿಗಾಗಿ ಡ್ರಿಲ್ ಮಾಡಲು ಶುರು ಮಾಡಿ.

ಶಾಲೆಯಲ್ಲಿ ಓದುವಾಗ ಮಾಡುತ್ತಿದ್ದ, ಕಪ್ಪೆ ಜಿಗ್ಗಿತ, ಕರಡಿ ಓಟಗಳಂತಹ ಡ್ರಿಲ್‌ಗಳನ್ನು ಮಾಡಿ. ಆ ಭಂಗಿಗಳಲ್ಲಿ ಚಲಿಸುವುದು ಎಷ್ಟು ಕಷ್ಟ ಎಂದು ಅರಿವಾಗುತ್ತದೆ. ಬಿಗಿಯಾದ ಸ್ನಾಯುಗಳು ಸಡಿಲವಾಗಲು ಈ ಭಂಗಿಗಳು ಸಹಕಾರಿ, ದೇಹದ ಅಶಕ್ತ ಭಾಗವನ್ನು ಗುರುತಿಸಿ ಅದನ್ನು ಬಲಗೊಳಿಸುವಂತಹ ಇತರ ವ್ಯಾಯಾಮಗಳನ್ನು ಮಾಡಿ.

* ಮೆಟ್ಟಿಲುಗಳನ್ನು ಬಳಸಿ: ಯಾವುದೇ ವ್ಯಾಯಾಮ ಮಾಡಲು ಕಾಲುಗಳು ಪ್ರಮುಖ ಪಾತ್ರ ವಹಿಸುತ್ತದೆ. ಈ ಭಾಗದಲ್ಲಿರುವ ಸ್ನಾಯು

ಗಳನ್ನು ಬಲಿಷ್ಠಗಳಿಸಿಕೊಂಡರೆ, ಹೆಚ್ಚು ಶ್ರಮ ಬಯಸುವ ಇತರ ಭಂಗಿಗಳ ವ್ಯಾಯಾಮ ಮಾಡಲು ಸಾಧ್ಯ. ಒಂದೇ ಮೆಟ್ಟಿಲನ್ನು ವೇಗವಾಗಿ ಹತ್ತುವುದು ಇಳಿಯುವುದು ಮಾಡಿ, ಆಯಾಸವಾದಾಗ ನಿಲ್ಲಿಸಿ. ಸ್ನಾಯುಗಳನ್ನು ನಿಧಾನವಾಗಿ ಮಸಾಜ್ ಮಾಡಿ. ಆದರೆ, ಜೋರಾಗಿ ತಿಕ್ಕಬೇಡಿ. ಈ ರೀತಿ ಪ್ರತಿನಿತ್ಯ ಮಾಡಿದಾಗ ಸ್ನಾಯುಗಳಲ್ಲಿ ಹೆಚ್ಚಿನ ಬಲ ತುಂಬಿಕೊಳ್ಳುತ್ತದೆ.

* ಸ್ಕಿಪಿಂಗ್, ಬ್ಯಾಟಿಂಗ್‌: ಪ್ರತಿ ನಿತ್ಯ ಬೆಳ್ಳಿಗೆ 10ರಿಂದ 15 ನಿಮಿಷ ಸ್ಕಿಪಿಂಗ್ ಮಾಡುವುದರಿಂದ ಸ್ನಾಯುಗಳು ಸಡಿಲಗೊಂಡು, ವ್ಯಾಯಾಮ ಮಾಡಲು ಅನುವು ಮಾಡಿಕೊಡುತ್ತದೆ. ಮನೆಯಲ್ಲಿರುವ ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು ವಿವಿಧ ಕ್ರಿಕೆಟ್ ಭಂಗಿಗಳನ್ನು ಅಭ್ಯಾಸಿಸುವುದರಿಂದ ಕೈಗಳಲ್ಲಿರುವ ಸ್ನಾಯುಗಳು ಬಲಗೊಳ್ಳುತ್ತವೆ.

* ಇಸ್ಪಿಟ್‌ ಎಲೆಗಳನ್ನು ವ್ಯಾಯಾಮಕ್ಕೆ ಬಳಸಿ: ಮನೆಯಲ್ಲಿರುವ ಇಸ್ಪಿಟ್‌ ಎಲೆಗಳನ್ನು ಉಪಯೋಗಿಸಿಕೊಂಡು ವ್ಯಾಯಾಮದ ಆಟವನ್ನು ಆಡಿ. ಇಸ್ಪಿಟ್‌ ಎಲೆಗಳನ್ನು ಚೆನ್ನಾಗಿ ಕಲಕಿ, ಒಂದು ಎಲೆ ತೆಗೆಯಿರಿ ಅದರಲ್ಲಿ ಬಂದ ಸಂಖ್ಯೆಯ ಅನುಗುಣವಾಗಿ ಪುಶ್ ಅಪ್ಸ್‌, ಪುಲ್ ಅಪ್ಸ್‌, ಸಿಟ್‌ ಅಪ್ಸ್‌ ಮಾಡಿ. ಮನೆಯ ಹೊರಾಂಗಣದಲ್ಲಿ ಜಾಗವಿದ್ದರೆ, ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಇಸ್ಪಿಟ್ ಎಲೆಗಳನ್ನು ಇಟ್ಟು ನಿಧಾನವಾಗಿ ಓಡುವ ಅಭ್ಯಾಸ ಮಾಡಿ.

ನಿರಂತರ ಪರಿಶ್ರಮ, ಕನಿಷ್ಠ ಒಂದು ಗಂಟೆ ಬೆವರು ಹರಿಸಿದರೆ ಮಾತ್ರ ದೇಹವನ್ನು ಸಧೃಡಕಾಯವಾಗಿ ರೂಪಿಸಬಹುದು. ನಿರಾಸಕ್ತಿಯಿಂದ ದೈಹಿಕ ಸೌಂದರ್ಯ ಕಾರ್ಯ ಸಾಧುವಾಗುವುದಿಲ್ಲ ಎಂಬುದನ್ನು ನೆನಪಿಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry