ಮಂಗಳವಾರ, ಡಿಸೆಂಬರ್ 10, 2019
20 °C

ಪಿಎನ್‌ಬಿ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯ ಶೋಧಕಾರ್ಯ, ₹5,716 ಕೋಟಿ ಸಂಪತ್ತು ವಶ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪಿಎನ್‌ಬಿ ವಂಚನೆ ಪ್ರಕರಣ: ಜಾರಿ ನಿರ್ದೇಶನಾಲಯ ಶೋಧಕಾರ್ಯ, ₹5,716 ಕೋಟಿ ಸಂಪತ್ತು ವಶ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹11,400 ಕೋಟಿ ವಂಚನೆ ಮಾಡಿರುವ ಪ್ರಕರಣದ ಸಂಬಂಧ ನೀರವ್ ಮೋದಿ ಮುಂಬೈ ನಿವಾಸದ ಮೇಲೆ ಸೋಮವಾರ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ. ಈವರೆಗಿನ ಶೋಧಕಾರ್ಯದಲ್ಲಿ ₹5,716 ಕೋಟಿ ಮೌಲ್ಯದ ಸಂಪತ್ತು ವಶಪಡಿಸಿಕೊಳ್ಳಲಾಗಿದೆ.

ಐದನೇ ದಿನ ಶೋಧ ಕಾರ್ಯ ಮುಂದುವರಿಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವರ್ಲಿಯ ಸಮುದ್ರ ಮಹಲ್‌ ಅಪಾರ್ಟ್‌ಮೆಂಟ್‌ ಸೇರಿ ದೇಶದ 38 ನಗರಗಳಲ್ಲಿ ದಾಳಿ ನಡೆಸಿದ್ದಾರೆ. ಚಿನ್ನ, ನಗದು ಹಾಗೂ ಅತ್ಯಮೂಲ್ಯ ರತ್ನಗಳನ್ನು ಒಳಗೊಂಡಂತೆ ₹22 ಕೋಟಿ ಮೌಲ್ಯದ ಸಂಪತ್ತನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ಪುಣೆ, ಮುಂಬೈ, ಠಾಣೆ, ಔರಂಗಬಾದ್‌, ಕೋಲ್ಕತ್ತಾ, ದೆಹಲಿ, ಜಮ್ಮು–ಕಾಶ್ಮೀರ ಹಾಗೂ ಸೂರತ್‌ ಸೇರಿ ಇತರೆಡೆ ನೀರವ್‌ ಮೋದಿ ಮತ್ತು ಅವರ ಸಂಬಂಧಿಕರು, ಉದ್ಯಮಿಗಳ ಸ್ಥಳಗಳಲ್ಲಿ ಶೋಧಕಾರ್ಯ ನಡೆದಿದೆ.

ಪ್ರತಿಕ್ರಿಯಿಸಿ (+)