4

ಹಗರಣಗಳ ಬಗ್ಗೆ ಮೋದಿ ಮಾತನಾಡುವುದಿಲ್ಲ ಯಾಕೆ?

Published:
Updated:
ಹಗರಣಗಳ ಬಗ್ಗೆ ಮೋದಿ ಮಾತನಾಡುವುದಿಲ್ಲ ಯಾಕೆ?

ಬೆಂಗಳೂರು: ಕಾಂಗ್ರೆಸ್‌–ಜೆಡಿಎಸ್‌ ಪ್ರಾಬಲ್ಯದ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ದೇಶದಲ್ಲಿ ಒಂದರ ಹಿಂದೆ ಹಗರಣಗಳು ನಡೆಯುತ್ತಿದ್ದರೂ ಮೋದಿ ಮೌನ ಪಾಲಿಸುತ್ತಿರುವುದು ಯಾಕೆ?. ಅವರ ಮೌನ  ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಸಹಾಯ ಮಾಡುತ್ತದೆ ಎಂದು ಅವರು ನಂಬಿರಬೇಕು- ಕಾಂಗ್ರೆಸ್ ಟ್ವೀಟ್ ಮಾಡಿದೆ.

ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗ ಹಾಗೂ ಮೈಸೂರು–ರಾಜಸ್ತಾನದ ಉದಯಪುರ ನಡುವಣ ‘ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌’ ನೂತನ ರೈಲು ಸಂಚಾರಕ್ಕೆ ಮೋದಿ ಇಂದು ಚಾಲನೆ ನೀಡಿದ್ದರು.

ಆದಾಗ್ಯೂ 2014 ರಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ ಮೈಸೂರನ್ನು ಪ್ಯಾರಿಸ್ ಮಾಡುವುದಾಗಿ ಹೇಳಿದ್ದರು. ಆದರೆ ಇವತ್ತು ಮೈಸೂರನ್ನು ಉದಯಪುರ್ ಮಾಡುವುದಾಗಿ ಭರವಸೆ ನೀಡಿದ್ದಾರೆ, ಇದೇನಾ ಅಭಿವೃದ್ಧಿ? ಎಂಬ ಟ್ವೀಟ್‍ನ್ನು ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ರಿಟ್ವೀಟ್ ಮಾಡಿದ್ದಾರೆ. 

ನಾವು ಕೇಳಿರುವ ಪ್ರಶ್ನೆಗೆ ಮೋದಿ ಉತ್ತರಿಸುತ್ತಾರೆ ಎಂದು ಭಾವಿಸಿದ್ದೆವು. ಇದರ ಬದಲು ಉದಯ್‍ಪುರ್- ಮೈಲೂ ರು ರೈಲಿಗೆ  ಚಾಲನೆ ನೀಡಿರುವುದನ್ನೇ ಅವರು ಬದಲಾವಣೆ ಎಂದು ಎಂದು ಅಂದು ಕೊಂಡಿದ್ದಾರೆ. ಇದು ಅವರ ಸರ್ಕಾರದ ನ್ಯೂನತೆಯನ್ನು ತೋರಿಸುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ .

ಮೌನ ಮೋದಿ ಟ್ರೆಂಡಿಂಗ್ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry