ನೇಮಕಾತಿಯ ಕುಂಟೋಬಿಲ್ಲೆ

7

ನೇಮಕಾತಿಯ ಕುಂಟೋಬಿಲ್ಲೆ

Published:
Updated:

ಪಿಯು ಉಪನ್ಯಾಸಕರ ನೇಮಕಾತಿ ಸಲುವಾಗಿ 2015ರ ಜೂನ್‌ನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆ ಹೊರಡಿಸಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡುತ್ತಾ ಬಂದು, ಕಳೆದ ತಿಂಗಳಷ್ಟೇ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿತ್ತು. ಈಗ ಮತ್ತೆ ಮುಂದೂಡಿದೆ.

ಇದರಿಂದ  ಆಕಾಂಕ್ಷಿಗಳ ಭವಿಷ್ಯವು ತೂಗುಯ್ಯಾಲೆಯಲ್ಲಿದೆ. ಇದಕ್ಕಾಗಿಯೇ ಹಗಲಿರುಳು ಶ್ರಮಿಸಿ ಅಧ್ಯಯನ ಮಾಡುತ್ತಿರುವ ಪರೀಕ್ಷಾರ್ಥಿಗಳು, ಬೇರೆ ಸ್ಪರ್ಧಾತ್ಮಕ ಪರೀಕ್ಷೆಗೂ ತಯಾರಾಗದೆ ಈ ಪರೀಕ್ಷೆಯನ್ನೇ ನಂಬಿರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಪ್ರಾಧಿಕಾರವು ಕೂಡಲೇ ಪರೀಕ್ಷಾ ದಿನಾಂಕವನ್ನು ಅಂತಿಮವಾಗಿ ಪ್ರಕಟಿಸಿ ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

- ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry