ಇಮ್ರಾನ್‌ ಖಾನ್‌ ಮೂರನೇ ಮದುವೆ

7

ಇಮ್ರಾನ್‌ ಖಾನ್‌ ಮೂರನೇ ಮದುವೆ

Published:
Updated:
ಇಮ್ರಾನ್‌ ಖಾನ್‌ ಮೂರನೇ ಮದುವೆ

ಲಾಹೋರ್‌: ಪಾಕಿಸ್ತಾನ್‌ ತೆಹ್ರಿಕ್–ಎ–ಇನ್ಸಾಫ್‌ (ಪಿಟಿಐ) ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಅವರು ತಮ್ಮ ಅಧ್ಯಾತ್ಮ ಮಾರ್ಗದರ್ಶಿ ಬುಶ್ರಾ ಮನೇಕಾ ಅವರನ್ನು ಮದುವೆಯಾಗಿದ್ದಾರೆ ಎಂದು ಪಕ್ಷದ ವಕ್ತಾರ ಫವಾದ್‌ ಚೌಧರಿ ದೃಢಪಡಿಸಿದ್ದಾರೆ.

ಪಾಕ್‌ ಪಠಾಣ್‌ನಲ್ಲಿರುವ ಬುಶ್ರಾ ಅವರ ಸಹೋದರನ ಮನೆಯಲ್ಲಿ ಭಾನುವಾರ ಮದುವೆ ಸಮಾರಂಭ ನಡೆದಿದೆ. ಪಿಟಿಐ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಮದುವೆ ನೆರವೇರಿಸಿದ್ದಾರೆ ಎಂದು ಫವಾದ್‌ ಟ್ವೀಟ್‌ ಮಾಡಿದ್ದಾರೆ.

ಪಿಟಿಐ ಪಕ್ಷವು ಮದುವೆ ಸಮಾರಂಭದ ಚಿತ್ರಗಳನ್ನು ಭಾನುವಾರ ತಡರಾತ್ರಿ ಬಿಡುಗಡೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry