ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಯೋಜನೆಗೆ ಪರ್ಯಾಯ?

ಭಾರತ, ಆಸ್ಟ್ರೇಲಿಯಾ, ಅಮೆರಿಕ, ಜಪಾನ್ ಸಹಭಾಗಿತ್ವ
Last Updated 19 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸಿಡ್ನಿ (ರಾಯಿಟರ್ಸ್): ಪ್ರಾದೇಶಿಕ ಮೂಲಸೌಕರ್ಯ ಯೋಜನೆಯನ್ನು ಸಹಭಾಗಿತ್ವದಡಿ ಆರಂಭಿಸಲು ಆಸ್ಟ್ರೇಲಿಯಾ, ಅಮೆರಿಕ, ಭಾರತ ಮತ್ತು ಜಪಾನ್ ಮುಂದಾಗಿವೆ.

‘ಒಂದು ವಲಯ ಒಂದು ರಸ್ತೆ ಯೋಜನೆ ಮೂಲಕ ಚೀನಾ ಪ್ರಾಬಲ್ಯ ಹೆಚ್ಚಿಸಿಕೊಳ್ಳುತ್ತಿದೆ. ಇದಕ್ಕೆ ಪರ್ಯಾಯವಾಗಿ ಹೊಸ ಯೋಜನೆ ಆರಂಭಿಸುವ ಚಿಂತನೆ ನಡೆದಿದೆ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ‘ಆಸ್ಟ್ರೇಲಿಯನ್ ಫೈನಾನ್ಷಿಯಲ್ ರಿವ್ಯೂ’ ವರದಿ ಮಾಡಿದೆ.

‘ಹೊಸ ಯೋಜನೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಂ ಟರ್ನ್‌ಬುಲ್ ಅವರು ಈ ವಾರದ ಕೊನೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡುವ ವೇಳೆ ಅದನ್ನು ಘೋಷಿಸುವ ಹಂತಕ್ಕೆ ತಲುಪಿರುವುದಿಲ್ಲ’ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಹೇಳಿದ್ದಾರೆ.

‘ಇದನ್ನು ಚೀನಾದ ಯೋಜನೆಯ ಪ್ರತಿಸ್ಪರ್ಧಿ ಎನ್ನುವುದಕ್ಕಿಂತ ಪರ್ಯಾಯ ಎಂದು ಕರೆದರೆ ಸೂಕ್ತ. ಚೀನಾ ಮೂಲಸೌಕರ್ಯ ವೃದ್ಧಿ ಮಾಡಬಾರದು ಎಂದು ಯಾರೂ ಹೇಳುತ್ತಿಲ್ಲ. ಆರ್ಥಿಕವಾಗಿ ಕಾರ್ಯಸಾಧುವಲ್ಲದ ಬಂದರನ್ನು ಚೀನಾ ನಿರ್ಮಿಸಬಹುದು. ನಾವು, ಆ ಬಂದರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ರೈಲು ಸೌಕರ್ಯ ಕಲ್ಪಿಸಬಹುದು’ ಎಂದು ಅಧಿಕಾರಿ ಹೇಳಿದ್ದಾಗಿ ವರದಿಯಲ್ಲಿ ತಿಳಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಜಪಾನ್‌ನ ಸಂಪುಟ ಕಾರ್ಯದರ್ಶಿ ಯೊಶಿಹಿದೆ ಸುಗಾ ಅವರು, ‘ಜಪಾನ್, ಅಮೆರಿಕ, ಆಸ್ಟ್ರೇಲಿಯಾ, ಭಾರತವು ತಮ್ಮ ಸಮಾನ ಹಿತಾಸಕ್ತಿಯ ಕುರಿತು ಪರಸ್ಪರರ ಅಭಿಪ್ರಾಯಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಲೇ ಬಂದಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT