ಶುಕ್ರವಾರ, ಡಿಸೆಂಬರ್ 6, 2019
24 °C

ಸಂಗಕ್ಕಾರ ದಾಖಲೆ ಮೀರಿದ ದೋನಿ

Published:
Updated:
ಸಂಗಕ್ಕಾರ ದಾಖಲೆ ಮೀರಿದ ದೋನಿ

ಜೋಹಾನ್ಸ್‌ಬರ್ಗ್‌ನಲ್ಲಿ  ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟ್ವೆಂಟಿ–20 ಪಂದ್ಯದಲ್ಲಿ ರೀಜಾ ಹೆನ್ರಿಕ್ಸ್‌ ಅವರ ಕ್ಯಾಚ್ ಪಡೆದ ಭಾರತದ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ದೋನಿ ಅವರು ಶ್ರೀಲಂಕಾದ ಕುಮಾರ ಸಂಗಕ್ಕಾರ ಹೆಸರಿನಲ್ಲಿದ್ದ ಆತಿ ಹೆಚ್ಚು ಕ್ಯಾಚ್ ಪಡೆದ ದಾಖಲೆಯನ್ನು ಮೀರಿನಿಂತರು. ಸಂಗಕ್ಕಾರ ಅವರು 133 ಕ್ಯಾಚ್ ಪಡೆದಿದ್ದರು.

ಅತಿ ಹೆಚ್ಚು ವಿಕೆಟ್ ಪಡೆದ ವಿಕೆಟ್‌ಕೀಪರ್‌ಗಳಲ್ಲಿ ದೋನಿ ಮೂರನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಮತ್ತು ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ.

ಅಂತರರಾಷ್ಟ್ರೀಯ, ಐಪಿಎಲ್, ಬಿಸಿಸಿಐ ಮತ್ತು ಐಸಿಸಿ ಮಾನ್ಯತೆ ಪಡೆದ ಟ್ವೆಂಟಿ–20 ಪಂದ್ಯಗಳು ಇದರಲ್ಲಿ ಸೇರಿವೆ. ದೋನಿ 87 ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದು, 48 ಕ್ಯಾಚ್, 29 ಸ್ಟಂಪಿಂಗ್ ಮಾಡಿದ್ದಾರೆ. ಐಪಿಎಲ್‌ನಲ್ಲಿ 159 ಪಂದ್ಯಗಳನ್ನು ಆಡಿ 76 ಕ್ಯಾಚ್ ಪಡೆದು 30 ಸ್ಟಂಪಿಂಗ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)