ಬುಧವಾರ, ಡಿಸೆಂಬರ್ 11, 2019
26 °C

‘ಸುಪ್ರೀಂ’ ಮೆಟ್ಟಿಲೇರಿದ ಪ್ರಿಯಾ ವಾರಿಯರ್

ಪಿಟಿಐ Updated:

ಅಕ್ಷರ ಗಾತ್ರ : | |

‘ಸುಪ್ರೀಂ’ ಮೆಟ್ಟಿಲೇರಿದ ಪ್ರಿಯಾ ವಾರಿಯರ್

ನವದೆಹಲಿ: ತೆಲಂಗಾಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಸೋಮವಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸದಂತೆ ರಾಜ್ಯಗಳಿಗೆ ನಿರ್ಬಂಧ ವಿಧಿಸಬೇಕು ಎಂದೂ ಅವರು ಕೋರಿದ್ದಾರೆ.

ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ಗೀತೆಯಲ್ಲಿ  ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಆಗುವ ವಿಚಾರಗಳಿವೆ ಎಂದು ಫಲಕ್‌ನಾಮಾ ಠಾಣೆಯಲ್ಲಿ ದೂರು ದಾಖಲಾಗಿತ್ತು.

‘ಮಲಯಾಳಂಯೇತರ ರಾಜ್ಯಗಳಲ್ಲಿ ದೂರು ದಾಖಲಿಸಿರುವವರು ಹಾಡನ್ನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಪ್ರವಾದಿ ಮಹಮದ್ ಹಾಗೂ ಅವರ ಮೊದಲ ಪತ್ನಿ ಖದೀಜಾ ಅವರ ನಡುವಿನ ಪ್ರೀತಿಯನ್ನು ಹಾಡು ಶ್ಲಾಘಿಸುತ್ತದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಇದು ಜಾನಪದ ಹಾಡು. ಜಬ್ಬಾರ್ ಎಂಬುವರು 1978ರಲ್ಲಿ ರಚಿಸಿದ್ದಾರೆ. ಕಳೆದ 40 ವರ್ಷಗಳಿಂದ ಮುಸ್ಲಿಮರು ಇದನ್ನು ಬಳಸುತ್ತಿದ್ದು, ಈಗ ಏಕೆ ವಿರೋಧಿಸುತ್ತಿದ್ದಾರೆ ಎಂದು ಪ್ರಿಯಾ ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)