ಶುಕ್ರವಾರ, ಡಿಸೆಂಬರ್ 6, 2019
25 °C

ಕಾವೇರಿ ಗ್ರಾಮೀಣ ಬ್ಯಾಂಕ್‌ 505ನೇ ಶಾಖೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ಗ್ರಾಮೀಣ ಬ್ಯಾಂಕ್‌ 505ನೇ ಶಾಖೆ ಉದ್ಘಾಟನೆ

ಬೆಂಗಳೂರು: ‌ಯಲಹಂಕ ಉಪನಗರ 4ನೇ ಹಂತದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕಿನ 505ನೇ ಶಾಖೆಯನ್ನು ಉದ್ಘಾಟಿಸಲಾಯಿತು.

ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕುಗಳು ಗ್ರಾಹಕರಿಗೆ ನೀಡುತ್ತಿರುವ ಸೇವೆಗಳ ಮಾದರಿಯಲ್ಲೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳೂ ಸೇವೆ ನೀಡುತ್ತಿವೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸುಲು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾವೇರಿ ಗ್ರಾಮೀಣ ಬ್ಯಾಂಕಿನ ಎಂ.ಭುವನೇಂದ್ರ ಠಾಕೂರ್, ‘ಬ್ಯಾಂಕ್‌ನ ಮತ್ತಷ್ಟು ಶಾಖೆಗಳನ್ನು ತೆರೆಯುವ ಗುರಿ ಇದೆ. ಗ್ರಾಹಕರಿಗೆ ಕನ್ನಡದಲ್ಲಿ ಎಸ್‌ಎಂಎಸ್‌ ಸೇವೆ ಒದಗಿಸಲಾಗುತ್ತಿದೆ. ಮಿಸ್ಡ್‌ ಕಾಲ್‌ ಸೌಲಭ್ಯದ ಮೂಲಕ ಖಾತೆಯ ವಿವರ ಪಡೆದುಕೊಳ್ಳಬಹುದು’ ಎಂದರು.

ಪ್ರತಿಕ್ರಿಯಿಸಿ (+)