ವಿ.ಎಸ್.ಬಸವರಾಜುಗೆ ಎಪಿಡಿಯಿಂದ ಅಭಿನಂದನೆ

7

ವಿ.ಎಸ್.ಬಸವರಾಜುಗೆ ಎಪಿಡಿಯಿಂದ ಅಭಿನಂದನೆ

Published:
Updated:

ಬೆಂಗಳೂರು: ಅಂಗವಿಕಲರ ಅಧಿನಿಯಮದ ಆಯುಕ್ತರಾಗಿ ನೇಮಕರಾಗಿರುವ ವಿ.ಎಸ್‌.ಬಸವರಾಜು ಅವರಿಗೆ ಅಸೋಸಿಯೇಷನ್‌ ಆಫ್‌ ಪೀಪಲ್ ವಿತ್‌ ಡಿಸೆಬಲಿಟಿ (ಎಪಿಡಿ) ಲಿಂಗಾರಾಜಪುರ ಶಾಖೆ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿ.ಎಸ್.ಬಸವರಾಜು, ‘26 ವರ್ಷಗಳಿಂದ ಎಪಿಡಿ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವುದು ಖುಷಿ ಕೊಟ್ಟಿದೆ. 2016ರಲ್ಲಿ ಹೊಸ ಅಂಗವಿಕಲರ ಕಾಯ್ದೆ ಜಾರಿ ಮಾಡುವ ವಿಚಾರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ಎಪಿಡಿ ಸದಸ್ಯ ವಿ.ಎಸ್‌.ಅರವಿಂದ್, ‘ಅಂಗವಿಕಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳು ಮತ್ತು ಸರ್ಕಾರ ಜೊತೆಗೂಡಿ ಕೆಲಸ ಮಾಡಿದಾಗ ಮಾತ್ರ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲು ಸಾಧ್ಯ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry