ಬುಧವಾರ, ಡಿಸೆಂಬರ್ 11, 2019
23 °C

ವಿಕ್ರಮ್‌ ಕೊಠಾರಿ ಮನೆ ಮೇಲೆ ಸಿಬಿಐ ದಾಳಿ; 20 ತಾಸಿನ ಬಳಿಕವೂ ಮುಂದುವರಿದ ಶೋಧ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಿಕ್ರಮ್‌ ಕೊಠಾರಿ ಮನೆ ಮೇಲೆ ಸಿಬಿಐ ದಾಳಿ; 20 ತಾಸಿನ ಬಳಿಕವೂ ಮುಂದುವರಿದ ಶೋಧ

ಕಾನ್ಪುರ: ರೊಟೊಮ್ಯಾಕ್‌ ಪೆನ್‌ ತಯಾರಿಕಾ ಕಂಪನಿಯ ನಿರ್ದೇಶಕ ವಿಕ್ರಮ್‌ ಕೊಠಾರಿ ವಿರುದ್ಧ ₹3,695 ಕೋಟಿ ವಂಚನೆಯ ಆರೋಪದ ದೂರು ದಾಖಲಿಸಿಕೊಂಡಿರುವ ಸಿಬಿಐ, ವಿಕ್ರಮ್‌ ಕೊಠಾರಿ ನಿವಾಸದ ಮೇಲೆ ದಾಳಿ ನಡೆಸಿದ್ದು, ಮಂಗಳವಾರವೂ ಶೋಧ ಕಾರ್ಯ ಮುಂದುವರಿಸಿದೆ.

ಸೋಮವಾರ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ಸತತ 20 ತಾಸುಗಳು ಕಳೆದರೂ ತನಿಖೆ ಮುಂದುವರಿಸಿದ್ದಾರೆ. ಸಿಬಿಐನ ಎರಡು ತಂಡಗಳು ಮನೆಯಲ್ಲಿ ಶೋಧ ನಡೆಸುತ್ತಿವೆ. 

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ವಜ್ರ ವ್ಯಾಪಾರಿ ನೀರವ್‌ ಮೋದಿ ₹11,400 ಕೋಟಿ ವಂಚನೆ ಮಾಡಿರುವ ಪ್ರಕರಣದ ಬೆನ್ನಿಗೇ ಈ ವಂಚನೆ ಬಗ್ಗೆ ತನಿಖೆ ಆರಂಭವಾಗಿದೆ.

ಇದು ₹800 ಕೋಟಿ ಮೊತ್ತದ ಹಗರಣ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಆದರೆ, ಕಂಪನಿಯ ಲೆಕ್ಕಪತ್ರಗಳನ್ನು ಸಿಬಿಐ ಪರಿಶೀಲಿಸಿದ ಬಳಿಕ ಏಳು ಬ್ಯಾಂಕುಗಳಿಗೆ ಪಾವತಿಸಲು ಬಾಕಿ ಇರುವ ಮೊತ್ತ ₹3,695 ಕೋಟಿ ಎಂಬ ಮಾಹಿತಿ ಸಿಕ್ಕಿತು. ಪಡೆದ ಸಾಲದ ಮೊತ್ತ ₹2,919 ಕೋಟಿ. ಆದರೆ, ಬಡ್ಡಿ ಸೇರಿ ಇದು ₹3,695 ಕೋಟಿಯಾಗಿದೆ. 2008ರಿಂದಲೇ ಈ ಸಾಲ ಪಡೆಯಲು ಆರಂಭಿಸಲಾಗಿದೆ.

* ಇವನ್ನೂ ಓದಿ...
ನಿಲ್ಲದ ವಂಚನೆ ಪರ್ವ: ಏಳು ಬ್ಯಾಂಕುಗಳಿಗೆ ₹3,695 ಕೋಟಿ ಪಾವತಿಸದ ರೊಟೊಮ್ಯಾಕ್‌ ಪ್ರವರ್ತಕ ವಿಕ್ರಮ್‌ ಕೊಠಾರಿ

ಪ್ರತಿಕ್ರಿಯಿಸಿ (+)