ಹದಗೆಟ್ಟ ರಸ್ತೆ ದುರಸ್ತಿಗೆ ಮನವಿ

7

ಹದಗೆಟ್ಟ ರಸ್ತೆ ದುರಸ್ತಿಗೆ ಮನವಿ

Published:
Updated:

ಕೆ.ಆರ್.ಪೇಟೆ: ತಾಲ್ಲೂಕು ಕೇಂದ್ರದಿಂದ 4 ಕಿ.ಮೀ ದೂರದಲ್ಲಿರುವ ಐತಿಹಾಸಿಕ ಗ್ರಾಮ ಅಗ್ರಹಾರಬಾಚಹಳ್ಳಿ. ಹೊಯ್ಸಳರ ಕಾಲದ ಪ್ರಸಿದ್ಧ ದೇಗುಲಗಳು ಇಲ್ಲಿವೆ. ಆದರೆ ಈ ಗ್ರಾಮಕ್ಕೆ ಹೋಗುವ ರಸ್ತೆ ಮಾತ್ರ ಸಂಪೂರ್ಣ ಹದಗೆಟ್ಟಿದ್ದು, ಡಾಂಬರು ಕಾಣದೆ ವರ್ಷಗಳೇ ಗತಿಸಿವೆ.

ಈ ರಸ್ತೆಯಲ್ಲಿ ಮೇಲಿಂದ ಮೇಲೆ ಸಂಭವಿಸುವ ಅಪಘಾತದಿಂದ ಜನರು ಆಸ್ಪತ್ರೆ ಸೇರಿದ್ದಾರೆ. ಇಬ್ಬರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಹೊಂಡದಲ್ಲಿ ರಸ್ತೆ ಎನ್ನುವಂತಹ ಸ್ಥಿತಿಯಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ರಸ್ತೆಯ ರಿಪೇರಿ ಮಾಡಿಸಿಲ್ಲ.

ಜನಪ್ರತಿನಿಧಿಗಳು ಇದರ ಬಗ್ಗೆ ತಲೆ ಕಡೆಸಿಕೊಂಡಿಲ್ಲ. ಈಗಲಾದರೂ ರಸ್ತೆ ದುರಸ್ತಿ ಮಾಡಿ ಮುಂದಾಗಬಹುದಾದ ಅನಾಹುತ ತಪ್ಪಿಸಿ ಎಂಬುದು ಈಭಾಗದ ಜನರ ಪರ ಮನವಿ. ಟೆಂಪೊ ಶ್ರೀನಿವಾಸ್ ಕರವೇ ತಾಲ್ಲೂಕು ಘಟಕದ ಕಾರ್ಯದರ್ಶಿ, ಅಗ್ರಹಾರಬಾಚಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry