ಬುಧವಾರ, ಡಿಸೆಂಬರ್ 11, 2019
22 °C

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ವಿರೋಧಿಗಳಿಲ್ಲ ಎಂಬಂತಾಗಿದೆ; ದಕ್ಷಿಣ ಭಾರತದಲ್ಲಿ ಕಮಲ ಅರಳಬೇಕು: ಅಮಿತ್ ಷಾ

Published:
Updated:
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ವಿರೋಧಿಗಳಿಲ್ಲ ಎಂಬಂತಾಗಿದೆ; ದಕ್ಷಿಣ ಭಾರತದಲ್ಲಿ ಕಮಲ ಅರಳಬೇಕು: ಅಮಿತ್ ಷಾ

ಸುಬ್ರಹ್ಮಣ್ಯ: ಬಿಜೆಪಿ ಕಾರ್ಯಕರ್ತರಿಗೆ ಚುನಾವಣೆಯನ್ನು ಗೆಲ್ಲುಸುವ ತಾಕತ್ತು ಇದೆ. ಪ್ರತಿ ಬೂತ್‌ನ ಒಂಭತ್ತು ನವರತ್ನಗಳು ಬಂದಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ವಿರೋಧಿಗಳು ಇಲ್ಲ ಎಂಬಂತಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹೇಳಿದರು.

ಕರ್ನಾಟಕದಲ್ಲಿ ಮೊದಲ ನವಶಕ್ತಿ ಸಮಾವೇಶ ಮಂಗಳವಾರ ಆರಂಭವಾಗಿದ್ದು, ಪ್ರತಿ ಬೂತ್‌ನ 9 ಮಂದಿ ಕಾರ್ಯಕರ್ತರಂತೆ ಭಾಗಿಯಾಗಿದ್ದಾರೆ. ಕಾರ್ಯಕರ್ತರನ್ನು ಉದ್ದೇಶಿಸಿ ಅಮಿತ್ ಶಾ ಮಾತನಾಡಿದರು.

2018ರ ಚುನಾವಣೆ ಕೇವಲ ಕರ್ನಾಟಕ್ಕೆ ಸೀಮಿತವಾಗಿಲ್ಲ. ಈ ಚುನಾವಣೆ ಗೆದ್ದು ದಕ್ಷಿಣ ಭಾರತದಲ್ಲಿ ಕಮಲ ಅರಳಬೇಕಾಗಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಹಾರಾಷ್ಟ್ರ, ಹರಿಯಾಣ, ಜಾರ್ಖಾಂಡ್, ಕಾಶ್ಮೀರ, ಅಸ್ಸಾಂ, ಮಣಿಪುರ, ಗೋವಾ, ಗುಜರಾತ್, ಉತ್ತರಖಾಂಡ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹೋಗಿ ಬಿಜೆಪಿ‌ ಬಂದಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಹೋಗಿ ಕಮಲ ಅರಳಬೇಕಾಗಿದೆ ಎಂದು ಹೇಳಿದರು.

ಸಮಾವೇಶದಲ್ಲಿ ಭಾಗವಹಿಸಿರುವ ಕಾರ್ಯಕರ್ತರು –ಪ್ರಜಾವಾಣಿ ಚಿತ್ರಗಳು

* ಇವನ್ನೂ ಓದಿ...

ಕುಕ್ಕೆ ದೇವರ ದರ್ಶನ ಪಡೆದ ಅಮಿತ್ ಶಾ

ಪ್ರತಿಕ್ರಿಯಿಸಿ (+)