ಶುಕ್ರವಾರ, ಡಿಸೆಂಬರ್ 6, 2019
25 °C

ಕಮಲಹಾಸನ್ ರಾಜಕೀಯ ಪಕ್ಷ ಬುಧವಾರ ಅಸ್ತಿತ್ವಕ್ಕೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕಮಲಹಾಸನ್ ರಾಜಕೀಯ ಪಕ್ಷ ಬುಧವಾರ ಅಸ್ತಿತ್ವಕ್ಕೆ

ಚೆನ್ನೈ: ನಟ ಕಮಲಹಾಸನ್ ಅವರ ರಾಜಕೀಯ ಪಕ್ಷ ಬುಧವಾರ ಮದುರೈನಲ್ಲಿ ಅಸ್ತಿತ್ವಕ್ಕೆ ಬರಲಿದೆ. ನಂತರ ಅವರು ತಮಿಳುನಾಡಿನಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ.

ಮೊದಲ ಹಂತದಲ್ಲಿ ಅವರು ರಾಮನಾಥಪುರ, ಮದುರೈ, ದಿಂಡಿಗಲ್ ಮತ್ತು ಶಿವಗಂಗೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾಗವಹಿಸುವ ಸಾಧ್ಯತೆ ಇದೆ.  ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೂ ಆಮಂತ್ರಣ ನೀಡಲಾಗಿದೆ. ಆದರೆ ಅವರ ಭಾಗವಹಿಸುವಿಕೆ ಇನ್ನೂ ದೃಢಪಟ್ಟಿಲ್ಲ.

ಕಮಲಹಾಸನ್ ಅವರು ಭಾನುವಾರ ಖ್ಯಾತ ನಟ ರಜನಿಕಾಂತ್ ಅವರನ್ನು ಭೇಟಿ ಮಾಡಿ 15 ನಿಮಿಷ ಮಾತುಕತೆ ನಡೆಸಿದ್ದರು. ರಜನಿಕಾಂತ್ ಅವರನ್ನೂ ಕಮಲಹಾಸನ್ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)