ಗುರುವಾರ , ಡಿಸೆಂಬರ್ 12, 2019
24 °C

'ಒರು ಅಡಾರ್‌ ಲವ್‌’ ಹಾಡಿನ ವಿವಾದ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಿಯಾ ವಾರಿಯರ್‌ ಅರ್ಜಿ ವಿಚಾರಣೆ

ಪಿಟಿಐ Updated:

ಅಕ್ಷರ ಗಾತ್ರ : | |

'ಒರು ಅಡಾರ್‌ ಲವ್‌’ ಹಾಡಿನ ವಿವಾದ: ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಿಯಾ ವಾರಿಯರ್‌ ಅರ್ಜಿ ವಿಚಾರಣೆ

ಬೆಂಗಳೂರು: ಕಣ್ಣೋಟದಿಂದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಮಲಯಾಳಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ 'ಒರು ಅಡಾರ್‌ ಲವ್‌’ ಚಿತ್ರದ ಗೀತೆಯೊಂದರ ಸಂಬಂಧ ದಾಖಲಾಗಿರುವ ಎಫ್‌ಐಆರ್‌ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಬುಧವಾರ ನಡೆಸಲಿದೆ.

ನಟಿ ಪರ ವಕೀಲ ಹರಿಸ್‌ ಬೀರನ್‌ ಅವರು ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಕೋರಿದ್ದು, ಫೆ. 21ರಂದು ಅರ್ಜಿಯ ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.

ತಮ್ಮ ವಿರುದ್ಧ ತೆಲಂಗಾಣದಲ್ಲಿ ಸಲ್ಲಿಕೆಯಾಗಿರುವ ಎಫ್‌ಐಆರ್‌ಅನ್ನು ರದ್ದುಗೊಳಿಸುವಂತೆ ಕೋರಿ 18 ವರ್ಷ ವಯಸ್ಸಿನ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸೋಮವಾರ ನ್ಯಾಯಾಲಕ್ಕೆ ಮನವಿ ಮಾಡಿದ್ದರು.

ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ' ಗೀತೆ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಕೆಲ ಮುಸ್ಲಿಂ ಯುವಕರ ಗುಂಪು ಹೈದರಾಬಾದ್‌ನ ಫಲಕ್ನುಮಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ‘ಮಾಣಿಕ್ಯ ಮಲರಾಯ..’ ಗೀತೆ ವಿರುದ್ಧ ಮಾತ್ರ ಆಕ್ಷೇಪಣೆ ಇದೆ. ಪ್ರಿಯಾ ಹಾಗೂ ಚಿತ್ರದ ನಿರ್ದೇಶಕರ ವಿರುದ್ಧ ಅಲ್ಲ ಎನ್ನಲಾಗಿದೆ.

* ಇವನ್ನೂ ಓದಿ...

* ಪ್ರಿಯಾ ಸಂದರ್ಶನ: ‘ಹಲೋ, ನಾನು ಪ್ರಿಯಾ ಮಾತಾಡ್ತಿದ್ದೀನಿ’

ಪ್ರತಿಕ್ರಿಯಿಸಿ (+)