‘ರೈತರ ಧ್ವನಿಯಾಗಿದ್ದ ಕೆ.ಎಸ್.ಪಿ’

7

‘ರೈತರ ಧ್ವನಿಯಾಗಿದ್ದ ಕೆ.ಎಸ್.ಪಿ’

Published:
Updated:

ಹಿರೇಕೆರೂರ: ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನಿಧನಕ್ಕೆ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ರೈತ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳೇರ ಮಾತನಾಡಿ, ‘ಯಾವುದೇ ರಾಜಕೀಯ ಪಕ್ಷದವರ ಆಮಿಷಗಳಿಗೆ ಒಳಗಾಗದೆ ರೈತರ ಸಮಸ್ಯೆ ಪರಿಹಾರಕ್ಕೆ ಸದನದ ಒಳಗೆ, ಹೊರಗೆ ರೈತರ ಧ್ವನಿಯಾಗಿ ಕೆ.ಎಸ್.ಪುಟ್ಟಣ್ಣಯ್ಯ ಹೋರಾಡಿದ್ದಾರೆ. ಅವರ ನಿಧನದಿಂದ ರೈತ ಸಮುದಾಯಕ್ಕೆ ಸಾಕಷ್ಟು ನಷ್ಟವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕ ಯು.ಬಿ.ಬಣಕಾರ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪಳವರ, ಎಸ್.ವಿ.ಚಪ್ಪರದಹಳ್ಳಿ, ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಹೂವನಗೌಡ ಮಳವಳ್ಳಿ, ಶಂಕ್ರಗೌಡ ಶಿರಗಂಬಿ, ಶಂಕ್ರಗೌಡ ಮಕ್ಕಳ್ಳಿ, ರಾಜು ಮುತ್ತಗಿ, ನಾಗನಗೌಡ ಪಾಟೀಲ, ಉಜ್ಜನಗೌಡ ಮುದಿಗೌಡ್ರ, ಗೌಸಮೊದ್ದೀನ್ ಸಾಬ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry