ಸೋಮವಾರ, ಡಿಸೆಂಬರ್ 9, 2019
22 °C

ಸಿದ್ದರಾಮಯ್ಯ ಪ್ರಧಾನಿ ಆಗಿದ್ದರೆ ಯಾವ ಕಳ್ಳನೂ ದೇಶ ಬಿಡುತ್ತಿರಲಿಲ್ಲ, ಅವರೊಂದಿಗೆ ನಾಟಿ ಕೋಳಿ ಸಾರು ತಿಂದು ಸುಖವಾಗಿರುತ್ತಿದ್ದರು: ಪ್ರತಾಪ್‌ ಸಿಂಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದರಾಮಯ್ಯ ಪ್ರಧಾನಿ ಆಗಿದ್ದರೆ ಯಾವ ಕಳ್ಳನೂ ದೇಶ ಬಿಡುತ್ತಿರಲಿಲ್ಲ, ಅವರೊಂದಿಗೆ ನಾಟಿ ಕೋಳಿ ಸಾರು ತಿಂದು ಸುಖವಾಗಿರುತ್ತಿದ್ದರು: ಪ್ರತಾಪ್‌ ಸಿಂಹ

ಬೆಂಗಳೂರು: ಸಿದ್ದರಾಮಯ್ಯ ಅವರು ಪ್ರಧಾನಿ ಆಗಿದ್ದರೆ ಯಾವ ಕಳ್ಳನೂ ದೇಶ ಬಿಡುತ್ತಿರಲಿಲ್ಲ, ಅವರೊಂದಿಗೆ ನಾಟಿ ಕೋಳಿ ಸಾರು ತಿಂದು ಸುಖವಾಗಿರುತ್ತಿದ್ದರು ಎಂದು ಸಂಸದ ಪ್ರತಾಪ್‌ ಸಿಂಹ ವ್ಯಂಗ್ಯವಾಡಿದ್ದಾರೆ.

₹11,500 ಕೋಟಿ ವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ನೀರವ್‌ ಮೋದಿ ವಿಚಾರವನ್ನು ಪ್ರಸ್ತಾಪಿಸಿ ಪ್ರಧಾನಿ ಮೋದಿ ಅವರನ್ನು ಟೀಕಿಸಿ ಸಿಎಂ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ಪ್ರತಾಪ್‌ ಸಿಂಹ ಪ್ರತಿಕ್ರಿಯಸಿದ್ದಾರೆ.

‘ಸಿದ್ದರಾಮಯ್ಯನವರೇ, ನೀವು ಪ್ರಧಾನಿಯಾಗಿದ್ದರೆ ಯಾವ ಕಳ್ಳನೂ ದೇಶ ಬಿಟ್ಟು ಓಡಿ ಹೋಗುತ್ತಿರಲಿಲ್ಲ, ನಿಮ್ಮ ಜೊತೆನೇ ನಾಟಿ ಕೋಳಿ ಸಾರು ತಿಂದುಕೊಂಡು ಸುಖವಾಗಿ ಇರುತ್ತಿದ್ದರು, ಹೈಕಮಾಂಡ್‌ಗೆ ಆಗಾಗ್ಗೆ ಸೂಟ್ಕೇಸ್ ಕಳಿಸಿಕೊಟ್ಟಿದ್ದರೆ ಸಾಕಿತ್ತು!’ ಎಂದು ಟ್ವೀಟಿಸಿದ್ದಾರೆ.

ಇನ್ನೂ ಬ್ಯಾಂಕ್‌ಗಳಲ್ಲಿ ವಂಚನೆ ಪ್ರಕರಣ ಹಾಗೂ ವಸೂಲಾಗದ ಸಾಲಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅವರ ಹೆಸರು ಪ್ರಸ್ತಾಪಿಸದೆ ಟೀಕಿಸಿದ್ದಾರೆ.

‘ಅಯ್ಯೋ ಸಿದ್ದರಾಮಯ್ಯನವರೇ ಬ್ಯಾಂಕುಗಳಲ್ಲಿ ₹52 ಲಕ್ಷ ಕೋಟಿ NPA ಆಗಿದ್ದು ನಿಮ್ಮ ಅಧಿನಾಯಕಿ ಕಾಲದಲ್ಲಿ ಹಾಗು ಬಹಳಷ್ಟು ಕಳ್ಳರೆಲ್ಲ ಆಕೆಯ ಅಳಿಯ ವಾದ್ರಾ ಜೊತೆ ಪಾರ್ಟಿ ಮಾಡಿಕೊಂಡು ಆರಾಮಾಗಿಯೇ ಇದ್ದರು. ಕಳ್ಳರೆಲ್ಲ ಇನ್ನು ಉಳಿಗಾಲವಿಲ್ಲ ಅಂತ ದೇಶ ಬಿಟ್ಟು ಓಡಿಹೋಗುತ್ತಿರುವುದು ಮೋದಿ ಕಾಲದಲ್ಲಿ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)