ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚು ಸಮಾನರು!

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶಾಸಕ ಹ್ಯಾರಿಸ್ ಅವರ ಪುತ್ರನ ಪುಂಡಾಟಿಕೆಗೆ ಅಮಾಯಕನೊಬ್ಬ ಆಸ್ಪತ್ರೆ ಸೇರಬೇಕಾಯಿತು. ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿದ್ದ ವ್ಯತ್ಯಯದ ಬಗ್ಗೆ ರಾಜ್ಯದ ಸಚಿವರೊಬ್ಬರನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ಅಪರಾತ್ರಿಯಲ್ಲಿ ಮನೆಯ ಮಾಳಿಗೆಯ ಹೆಂಚು ತೆಗೆದು ಇಳಿದು ಗ್ರಾಹಕರೊಬ್ಬರನ್ನು ಬಂಧಿಸಿದ್ದರು. ಆದರೆ ಅದೇ ಪೊಲೀಸರಿಗೆ ಈಗ ಶಾಸಕರ ಪುತ್ರನ ಮದ್ಯದ ಅಮಲು ಇಳಿಯುವವರೆಗೆ ಬಂಧಿಸಲು ಸಾಧ್ಯವಾಗಲಿಲ್ಲ. ಆರೋಪಿಯ ಮನೆಯನ್ನು ಪರಿಶೀಲಿಸಲು 48 ಗಂಟೆ ಬೇಕಾಯಿತು!

ಭಾನುವಾರ ನ್ಯಾಯಾಲಯಗಳಿಗೆ ರಜೆ. ಹೀಗಾಗಿ ಜಾಮೀನು ಪಡೆಯುವುದು ಕಷ್ಟ. ಶಾಸಕರ ಪುತ್ರನಿಗೆ ಜೈಲುವಾಸ ಸರಿಹೋಗುವುದಿಲ್ಲ ಎಂದು ಶರಣಾಗಲು ಸೋಮವಾರದವರೆಗೂ ಸಮಯಾವಕಾಶ ನೀಡುತ್ತಾರೆ!

ಜನಸಾಮಾನ್ಯರಿಗೊಂದು ಕಾನೂನು, ಪ್ರಭಾವಿಗಳಿಗೊಂದು ಕಾನೂನು ಇಲ್ಲ ಎಂದು ಬಹಿರಂಗವಾಗಿ ಹೇಳುತ್ತ, ಜನರ ಕಣ್ಣೊರೆಸಲು ಪೊಲೀಸರನ್ನು ಅಮಾನುತುಗೊಳಿಸಿ ನಾಟಕವಾಡುವ ರಾಜಕೀಯ ಧುರೀಣರು ಮಾತ್ರ ನಮ್ಮ ದೇಶದಲ್ಲಿ ಈಗಲೂ ‘ಹೆಚ್ಚು ಸಮಾನರು!’ ಹ್ಯಾರಿಸ್ ಪುತ್ರ ತಪ್ಪು ಮಾಡಿಲ್ಲವಾದರೆ ತಪ್ಪಿಸಿಕೊಂಡು ಓಡಾಡಿದ್ದೇಕೆ ಎಂಬ ಪ್ರಶ್ನೆ ಜನಸಾಮಾನ್ಯರ ತಲೆತಿನ್ನುತ್ತಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT