7

ಚಂದದ ಕಾರ್ಯಕ್ರಮ

Published:
Updated:

ಪ್ರತಿದಿನ ಬೆಳಿಗ್ಗೆ 7ರಿಂದ 9ರ ವರೆಗೆ ‘ಚಂದನ’ ವಾಹಿನಿಯಲ್ಲಿ ಬಿತ್ತರವಾಗುವ ‘ಶುಭೋದಯ ಕರ್ನಾಟಕ’ ಕಾರ್ಯಕ್ರಮವು ವಿವಿಧ ಕ್ಷೇತ್ರಗಳ ಸಾಧಕರಿಗೆ ವೇದಿಕೆ ಒದಗಿಸಿ ಅವರ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ಅವರ ಜೀವನ ಸಾಧನೆಗಳನ್ನು ತಿಳಿಸಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ. ಇದೊಂದು ಅರ್ಥಪೂರ್ಣ ಹಾಗೂ ಅತ್ಯುತ್ತಮ ಕಾರ್ಯಕ್ರಮ. ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಭ್ರಷ್ಟಾಚಾರ, ಅಪಘಾತದಂತಹ ಸುದ್ದಿಗಳನ್ನು ವೈಭವೀಕರಿಸಿ ‘ಬ್ರೇಕಿಂಗ್ ನ್ಯೂಸ್’ ಮಾಡಿ ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಹೆಣಗುವ ಟಿ.ವಿ. ವಾಹಿನಿಗಳಿಗೆ ಚಂದನ ವಾಹಿನಿಯ ಈ ಕಾರ್ಯಕ್ರಮ ಮಾದರಿ.

ಇಂದಿನ ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕೆ ಮಾರ್ಗದರ್ಶನದಂತಿರುವ, ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವ ಕಾರ್ಯಕ್ರಮ ಇದಾಗಿದೆ.- ಕೊತ್ತಲವಾಡಿ ಶಿವಕುಮಾರ್, ಚಾಮರಾಜನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry