ಯಾರ ಹಂಗೂ ಇಲ್ಲ

5

ಯಾರ ಹಂಗೂ ಇಲ್ಲ

Published:
Updated:

ಮೈಸೂರಿನಲ್ಲಿ ಬಿಜೆಪಿಯ ‘ಪರಿವರ್ತನಾ ಯಾತ್ರೆ’ಯಲ್ಲಿ ಮಾತನಾಡಿದ ‍ಪ್ರಧಾನಿ ನರೇಂದ್ರ ಮೋದಿ ‘ನಿಮಗೆ ಕಮಿಷನ್ ಸರ್ಕಾರ ಬೇಕಾ; ಮಿಷನ್ ಸರ್ಕಾರ ಬೇಕಾ’ ಎಂದು ಮತದಾರರನ್ನು ಕೇಳಿದ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಹೈಕಮಾಂಡ್‌ಗೆ ಎ.ಟಿ.ಎಂ. ಆಗಿರುವ ಕಾಂಗ್ರೆಸ್ ಸರ್ಕಾರ ಹಾಗೂ ‘ಒಂದು ರಾಷ್ಟ್ರ ಒಂದು ತೆರಿಗೆ’ ಘೋಷಣೆಯೊಂದಿಗೆ ಜಿ.ಎಸ್.ಟಿ.ಯನ್ನು ತಂದರೂ ಪೆಟ್ರೋಲ್, ಡೀಸಲ್ ಮತ್ತಿತರ ಕೆಲವು ಪದಾರ್ಥಗಳನ್ನು ಜಿ.ಎಸ್.ಟಿ. ವ್ಯಾಪ್ತಿಯಿಂದ ಹೊರಗಿಟ್ಟು ಜನರಿಗೆ ಮೋಸ ಮಾಡುತ್ತಿರುವ ಕೇಂದ್ರ ಸರ್ಕಾರವನ್ನು ನೋಡಿದ ಮತದಾರ ಪ್ರಭು ಮಾತ್ರ ‘ನಮಗೆ ಕಮಿಷನ್ ಸರ್ಕಾರವೂ ಬೇಡ...ಮಿಷನ್ ಸರ್ಕಾರವೂ ಬೇಡ.

ವಿಜನ್ (ದೂರದೃಷ್ಟಿ) ಇರುವ ಸರ್ಕಾರ ಬರಲಿ’ ಎಂದು ಮೂರನೆಯ ಪಕ್ಷದ ಕಡೆಗೆ ನೋಡುವಂತಾಗಿದೆ. ಯಾರು ಉತ್ತಮರು, ಯಾರು ದೂರದೃಷ್ಟಿಯುಳ್ಳ ಸರ್ಕಾರವನ್ನು ನೀಡಬಲ್ಲರು ಎಂಬುವುದೇ ಜನಸಾಮಾನ್ಯರ ಪ್ರಶ್ನೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry