ಬುಧವಾರ, ಡಿಸೆಂಬರ್ 11, 2019
26 °C

ಸಹಪಾಠಿಯಿಂದಲೇ ವಿದ್ಯಾರ್ಥಿನಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಹಪಾಠಿಯಿಂದಲೇ ವಿದ್ಯಾರ್ಥಿನಿ ಕೊಲೆ

ಸುಳ್ಳ:  ಇಲ್ಲಿಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ವಿದ್ಯಾರ್ಥಿನಿಯನ್ನು ಆಕೆಯ ಕಾಲೇಜಿನ ವಿದ್ಯಾರ್ಥಿ ಸಾರ್ವಜನಿಕರ ಎದುರೇ ಮಂಗಳವಾರ ಸಂಜೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.

ದ್ವಿತೀಯ ಬಿಎಸ್‌ಸಿ ವಿದ್ಯಾರ್ಥಿನಿ ಅಕ್ಷತಾ (21) ಕೊಲೆಯಾದವರು.  ದ್ವಿತೀಯ ಬಿಕಾಂನ ಕಾರ್ತಿಕ್‌ ನಾರ್ಣಕಜೆ ಆರೋಪಿ.

ಅಕ್ಷತಾ ಸಂಜೆ 4.30 ಕ್ಕೆ ಕಾಲೇಜಿನಿಂದ ಬಸ್‌ನಿಲ್ದಾಣದ ಕಡೆಗೆ ಬರುತ್ತಿದ್ದಾಗ ಬಿಎಸ್‌ಎನ್‌ಎಲ್‌ ಕಚೇರಿ ಬಳಿ ಆಕೆಯ ಎದುರು ಬಂದ ಕಾರ್ತಿಕ್‌ ತನ್ನ ಕೈಯಲ್ಲಿದ್ದ ಚಾಕುವಿನಿಂದ 6 ಬಾರಿ ಇರಿದಿದ್ದ. ಗಂಭೀರ ಗಾಯಗೊಂಡ ವಿದ್ಯಾರ್ಥಿನಿ ಅಲ್ಲೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಕಾರ್ತಿಕ್‌ನನ್ನು ಸಾರ್ವಜನಿಕರೇ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)