ಭಾನುವಾರ, ಡಿಸೆಂಬರ್ 8, 2019
24 °C

ನೆಟ್ಟಿಗರಿಂದ ಅಮಿಷಾ ಟ್ರೋಲ್‌

Published:
Updated:
ನೆಟ್ಟಿಗರಿಂದ ಅಮಿಷಾ ಟ್ರೋಲ್‌

ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲವಾಗಿರುವ ಅಮಿಷಾ ಪಟೇಲ್‌ ಈಗ ಅದರಿಂದಲೇ ಟ್ರೋಲ್‌ ಹೈಕಳ ಬಾಯಿಗೆ ಸಿಲುಕಿದ್ದಾರೆ.

ತಾಪ್ಸಿ ಪನ್ನು, ಕಲ್ಕಿ ಕೊಯ್ಲಿನ್, ರಿಚಾ ಚಡ್ಡಾ, ರಾಧಿಕಾ ಆಪ್ಟೆ ಅವರ ನಂತರ ‘ಕಹೋ ನಾ ಪ್ಯಾರ್‌ ಹೇ’ ಚೆಲುವೆ ನೆಟ್ಟಿಗರಿಂದ ಟ್ರೋಲ್‌ ಆಗಿದ್ದಾರೆ.  42ರ ಪ್ರಾಯದ ಅಮಿಷಾ ಇತ್ತೀಚೆಗಷ್ಟೇ ಫೋಟೊ ಶೂಟ್‌ ಮಾಡಿಸಿಕೊಂಡಿದ್ದರು.

ನೀರಿನಲ್ಲಿ ಮಿಂದೆದ್ದ ಈ ಚಿತ್ರವನ್ನು ಅವರು, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಹಲವರು ಆಂಟಿ ಎಂದೆಲ್ಲಾ ಹೀಯಾಳಿಸಿದ್ದಾರೆ. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಇವರು, ಮತ್ತೆರಡು ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಕಳೆದ ವರ್ಷವೂ ಉಡುಪಿನ ಕಾರಣಕ್ಕೇ ಇವರು ಟ್ರೋಲ್‌ ಆಗಿದ್ದರು.

ಪ್ರತಿಕ್ರಿಯಿಸಿ (+)