ಮಕ್ಕಳನ್ನು ಹೋಲುವ ಕೇಕ್‌

7

ಮಕ್ಕಳನ್ನು ಹೋಲುವ ಕೇಕ್‌

Published:
Updated:
ಮಕ್ಕಳನ್ನು ಹೋಲುವ ಕೇಕ್‌

ಮಕ್ಕಳ ಮೊದಲ ಹುಟ್ಟುಹಬ್ಬವನ್ನು ಅವಿಸ್ಮರಣೀಯವಾಗಿಸಲು ಪ್ರತಿ ತಂದೆ ತಾಯಿಯೂ ಏನಾದರೂ ಹೊಸ ಚಿಂತನೆ ಮಾಡುವುದು ಸಾಮಾನ್ಯ. ಇಂಗ್ಲೆಂಡ್‌ ವೆಸ್ಟ್‌ ಮಿಡ್‌ಲ್ಯಾಂಡ್ಸ್‌ನ ಲಾರಾ ಮ್ಯಾಸನ್‌ ಎಂಬ ತಾಯಿ ತನ್ನ ಅವಳಿ ಹೆಣ್ಣು ಮಕ್ಕಳ ಮೊದಲ ಹುಟ್ಟುಹಬ್ಬಕ್ಕೆ ಅವರಷ್ಟೇ ದೊಡ್ಡ, ಅವರನ್ನೇ ಹೋಲುವ ಕೇಕ್‌ಗಳನ್ನು ಖುದ್ದಾಗಿ ತಯಾರಿಸಿ ಸುದ್ದಿಯಾಗಿದ್ದಾರೆ.

‘ಲಿಲಿ ಮತ್ತು ಲೈಲಾ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲು ಏನು ಮಾಡಬಹುದು ಎಂದು ಯೋಚಿಸುತ್ತಿದ್ದೆ. ಅವರಂತೆಯೇ ಇರುವ ಕೇಕ್‌ ಮಾಡಿದರೆ ಹೇಗೆ ಎಂಬ ಯೋಚನೆ ಬಂತು. ಬೇರೆ ಬೇರೆ ವಿನ್ಯಾಸಗಳನ್ನು ಮಾಡುತ್ತಾ ಹೋದೆ. ಅಂತಿಮವಾಗಿ ಈ ಎರಡು ಕೇಕ್‌ ಸಿದ್ಧಪಡಿಸಿದೆ. ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ನಾನು ರೆಡಿ’ ಎಂದು ನಗುತ್ತಾರೆ ಲಾರಾ.

ಈ ಕೇಕ್‌ಗಳನ್ನು ತಯಾರಿಸಲು ಬೇಕಾದ ಸಾಮಗ್ರಿಯ ಪಟ್ಟಿ ನೋಡಿದರೆ ನೀವೂ ಬೆಚ್ಚಿಬೀಳುತ್ತೀರಿ. 44 ಮೊಟ್ಟೆ, 2.2 ಕೆ.ಜಿ ಹಿಟ್ಟು, 4 ಕೆ.ಜಿ ಬಟರ್‌ಕ್ರೀಂ ಬೇಕಾಯಿತಂತೆ. ಕೇಕ್ ಮಾಡಲು ಸುಮಾರು 100 ಗಂಟೆ ತಗುಲಿತಂತೆ. ಲಾರಾ ಅವರ ಈ ಸಾಹಸ ಈಗ ಜಗತ್ತಿನಲ್ಲಿ ಅತ್ಯಂತ ಚರ್ಚಿತ ಸಂಗತಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry