ಚೀನಾ: ಭಾರತ ಗಡಿಯಲ್ಲಿ ರಕ್ಷಣಾ ವ್ಯವಸ್ಥೆ ಮೇಲ್ದರ್ಜೆಗೆ

7

ಚೀನಾ: ಭಾರತ ಗಡಿಯಲ್ಲಿ ರಕ್ಷಣಾ ವ್ಯವಸ್ಥೆ ಮೇಲ್ದರ್ಜೆಗೆ

Published:
Updated:

ಬೀಜಿಂಗ್ (ಪಿಟಿಐ): ‘ಪಶ್ಚಿಮ ವಲಯದ ವಾಯುಪ್ರದೇಶದ ರಕ್ಷಣಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುತ್ತಿರುವುದಾಗಿ ಸೇನಾ ತಜ್ಞರು ಹೇಳಿದ್ದಾರೆ’ ಎಂದು ಚೀನಾದ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

‘ಭಾರತದಿಂದ ಎದುರಾಗಬಹುದಾದ ಯಾವುದೇ ಆತಂಕವನ್ನು ನಿರ್ವಹಿಸುವ ಮತ್ತು ವಾಸ್ತವ ಗಡಿ ರೇಖೆಯಲ್ಲಿ ಭದ್ರತೆ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

‘ಪಶ್ಚಿಮ ಚೀನಾ ಪ್ರದೇಶದಲ್ಲಿ ಹೊಸ ಯುದ್ಧ ವಿಮಾನಗಳು ಹಾರಾಡುತ್ತಿರುವ ಚಿತ್ರಗಳನ್ನು ಚೀನಾ ಸೇನೆ ಬಿಡುಗಡೆ ಮಾಡಿದೆ’ ಎಂದು  ಬರೆಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry