ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿಯಲ್ಲಿ ಇದೇ ಮೊದಲ ಬಾರಿ ಆಯೋಜನೆ: ‘ಅರಬ್ ಫ್ಯಾಷನ್ ವೀಕ್’

Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ದುಬೈ (ಐಎಸ್‌ಟಿ): ದಶಕಗಳಿಂದ ಕಲೆ, ಮನರಂಜನೆ ಮೇಲೆ ಕಠಿಣ ಕಾನೂನು ಜಾರಿಯಲ್ಲಿರುವ ಸೌದಿ ಅರೇಬಿಯಾದಲ್ಲಿ ಇದೇ ಮೊದಲ ಬಾರಿ ಫ್ಯಾಷನ್ ಷೋ ನಡೆಯಲಿದೆ.

ಮಾರ್ಚ್‌ 26 ರಿಂದ 31ರವರೆಗೆ ರಿಯಾದ್ ನಗರದಲ್ಲಿ ‘ಅರಬ್‌ ಫ್ಯಾಷನ್ ವೀಕ್’ ಆಯೋಜನೆಯಾಗಿದೆ. ‘ಎರಡನೇ ಸುತ್ತಿನ ಫ್ಯಾಷನ್ ಷೋ ಅಕ್ಟೋಬರ್‌ ನಲ್ಲಿ ನಡೆಯಲಿದೆ’ ಎಂದು ಅರಬ್ ಫ್ಯಾಷನ್ ಕೌನ್ಸಿಲ್ ತನ್ನ ಜಾಲತಾಣದಲ್ಲಿ ಮಂಗಳವಾರ ಪ್ರಕಟಿಸಿದೆ.

‘ತೈಲ ಉತ್ಪಾದನೆಯಲ್ಲಿ ಯಶಸ್ಸು ಸಾಧಿಸಿರುವ ದೇಶವನ್ನು ಖಾಸಗೀಕರಣ ಹಾಗೂ ಮಹಿಳಾ ಸಬಲೀಕರಣದಲ್ಲೂ ಮುನ್ನೆಲೆಗೆ ತರಬೇಕು’ ಎಂಬ ಆಶಯವನ್ನು ಸೌದಿ ಸಿಂಹಾಸನದ ಉತ್ತರಾಧಿಕಾರಿ ಮೊಹಮ್ಮದ್ ಬಿನ್ ಸಲ್ಮಾನ್ ವ್ಯಕ್ತಪಡಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಅರಬ್ ಫ್ಯಾಷನ್ ಕೌನ್ಸಿಲ್ ರಿಯಾದ್‌ ನಗರದಲ್ಲಿ ಪ್ರಾದೇಶಿಕ ಕಚೇರಿ ತೆರೆದು, ಸೌದಿ ರಾಜಕುಮಾರಿ ನೌರಾ ಬಿಂಟ್ ಫೈಸಲ್ ಅಲ್-ಸೌದ್ ಅವರನ್ನು ಗೌರವಾಧ್ಯಕ್ಷೆಯಾನ್ನಾಗಿ ಮಾಡಿತ್ತು.

‘ರಿಯಾದ್‌ ನಗರದಲ್ಲಿ ನಡೆಯುತ್ತಿರುವುದು ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್ ಷೋ. ಪ್ರವಾಸೋದ್ಯಮದಂಥ ಹಲವು ಆರ್ಥಿಕ ವಲಯಗಳ ಬೆಳವಣಿಗೆಗೆ ಇದು ಪೂರಕ’ ಎಂಬ ನೌರಾ ಬಿಂಟ್ ಫೈಸಲ್ ಅಲ್-ಸೌದ್ ಅವರ ಹೇಳಿಕೆಯನ್ನು ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಪ್ಯಾರಿಸ್ ಹಾಗೂ ಮಿಲನ್ ನಗರಗಳಲ್ಲಿ ನಡೆಯುವ ಫ್ಯಾಷನ್‌ ಷೋಗಳಷ್ಟೇ ದೊಡ್ಡಮಟ್ಟದ ಫ್ಯಾಷನ್ ಷೋ ಇದಾಗಿದ್ದು, ಇಲ್ಲಿ ಪ್ರದರ್ಶಿಸುವ ದಿರಿಸು ಇಷ್ಟವಾದರೆ ‘ಸಿ ನೌ ಬೈ ನೌ’ ಎಂಬ ಪರಿಕಲ್ಪನೆಯಲ್ಲಿ ಆ ದುಬಾರಿ ದಿರಿಸನ್ನು ಅಲ್ಲೇ ಖರೀದಿಸುವ ಅವಕಾಶವೂ ಇದೆ.

ಫ್ಯಾಷನ್‌ ಷೋದಲ್ಲಿ ಪ್ರದರ್ಶನವಾಗುವ ದಿರಿಸಿನ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ವಸ್ತ್ರಸಂಹಿತೆ ಇರುವ ದುಬೈನಲ್ಲಿ ಅಧುನಿಕ ಉಡುಗೆಗಳ ಪ್ರದರ್ಶನವೂ ಇರಲಿದೆಯೇ ಎಂಬುದು ಕುತೂಹಲ ಹುಟ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT