ಎಫ್‌ಐಆರ್‌ ರದ್ದತಿ: ಪ್ರಿಯಾ ಅರ್ಜಿ ವಿಚಾರಣೆ ಇಂದು

7

ಎಫ್‌ಐಆರ್‌ ರದ್ದತಿ: ಪ್ರಿಯಾ ಅರ್ಜಿ ವಿಚಾರಣೆ ಇಂದು

Published:
Updated:

ನವದೆಹಲಿ: ತಮ್ಮ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ರದ್ದತಿಗೆ ಕೋರಿ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಬುಧವಾರ ನಡೆಸಲಿದೆ.

ಕಣ್ಣು ಮಿಟುಕಿಸುವ ಮೂಲಕ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಪ್ರಿಯಾ ವಿರುದ್ಧ ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ದೂರು ದಾಖಲಾಗಿದೆ. ‘ಒರು ಅಡಾರ್‌ ಲವ್‌’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ' ಗೀತೆಯು ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ದೂರಿ ಕೆಲ ಮುಸ್ಲಿಮರು ದೂರು ದಾಖಲು ಮಾಡಿದ್ದಾರೆ.

ಈ ದೂರಿನ ಅನ್ವಯ ದಾಖಲಾಗಿರುವ ಎಫ್‌ಐಆರ್‌ ರದ್ದತಿಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಶೀಘ್ರದಲ್ಲಿ ನಡೆಸುವಂತೆ ನಟಿ ಪರ ವಕೀಲ ಹರಿಸ್‌ ಬೀರನ್‌ ಕೋರ್ಟ್‌ ಅನ್ನು ಕೋರಿದರು. ಮನವಿಯನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry