‘ಚಾರ್‌ ಧಾಮ್‌’ ಸುರಂಗಕ್ಕೆ ₹1,384 ಕೋಟಿ ಬಿಡುಗಡೆ

7

‘ಚಾರ್‌ ಧಾಮ್‌’ ಸುರಂಗಕ್ಕೆ ₹1,384 ಕೋಟಿ ಬಿಡುಗಡೆ

Published:
Updated:

ನವದೆಹಲಿ: ಕೇದಾರನಾಥ, ಬದರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿಯನ್ನು ಸಂಪರ್ಕಿಸುವ ಸಲುವಾಗಿ ತಯಾರಾಗುತ್ತಿರುವ ‘ಚಾರ್‌ ಧಾಮ್‌’ ಯೋಜನೆಯ ಸುರಂಗ ಮಾರ್ಗಕ್ಕೆ ₹1,384 ಕೋಟಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸುರಂಗವು ಎರಡು ಪಥದ್ದಾಗಿದ್ದು, 4.5 ಕಿ.ಮೀ ಉದ್ದವಿದೆ. ಧರಸುವಿನಿಂದ ಯಮುನೋತ್ರಿಯ ನಡುವಿನ ಅಂತರವು ಈ ಸುರಂಗದಿಂದಾಗಿ 20ಕಿ.ಮೀ. ಕಡಿಮೆಯಾಗಲಿದ್ದು, ಪ್ರಯಾಣದ ಅವಧಿಯನ್ನು ಸುಮಾರು ಒಂದು ಗಂಟೆ ಕಡಿಮೆ ಮಾಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry