ವಂಚನೆ: ಲತಾ ರಜನಿಕಾಂತ್‌ ವಿರುದ್ಧ ಆದೇಶ

7

ವಂಚನೆ: ಲತಾ ರಜನಿಕಾಂತ್‌ ವಿರುದ್ಧ ಆದೇಶ

Published:
Updated:

ನವದೆಹಲಿ: ನಟ ರಜನಿಕಾಂತ್‌ ಅವರ ಹೆಂಡತಿ ಲತಾ ಅವರಿಂದ ವಂಚನೆಗೆ ಒಳಗಾಗಿರುವ ಕಂಪನಿಗೆ ₹6.2 ಕೋಟಿ ಪಾವತಿಸುವಂತೆ ಸುಪ್ರೀಂಕೋರ್ಟ್‌ ಲತಾ ಅವರಿಗೆ ಆದೇಶಿಸಿದೆ. ಈ ಹಣ ಸಂದಾಯ ಮಾಡಲು ಮೂರು ತಿಂಗಳ ಗಡುವು ನೀಡಿದೆ.

ರಜನಿಕಾಂತ್ ಅಭಿನಯದ ಕೊಚಾಡಿಯಾನ್ ಚಿತ್ರದ ‘ಪೋಸ್ಟ್ ಪ್ರೊಡಕ್ಷನ್‌’ ಕಾರ್ಯವನ್ನು ತಮಿಳುನಾಡು ಮೂಲದ ಕಂಪನಿಯೊಂದು ವಹಿಸಿಕೊಂಡಿತ್ತು.

ಆದರೆ ಕೆಲ ದಾಖಲಾತಿ ಪತ್ರಗಳನ್ನು ಫೋರ್ಜರಿ ಮಾಡುವ ಮೂಲಕ ಲತಾ ನಿರ್ದೇಶಕರಾಗಿರುವ ‘ಮೀಡಿಯಾ ಒನ್‌ ಗ್ಲೋಬಲ್‌ ಎಂಟರ್‌ಟೇನ್‌ಮೆಂಟ್‌ ಲಿಮಿಟೆಡ್‌’, ಆ ಕಂಪನಿಗೆ ವಂಚಿಸಿರುವ ಆರೋಪವಿದೆ. ಈ ಸಂಬಂಧ ಲತಾ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ. ಕೋರ್ಟ್‌ ಈ ವಿಚಾರಣೆ ನಡೆಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry