ಭಾರತ ತಂಡದಲ್ಲಿ ಉತ್ತಪ್ಪಗೆ ಸ್ಥಾನ

7

ಭಾರತ ತಂಡದಲ್ಲಿ ಉತ್ತಪ್ಪಗೆ ಸ್ಥಾನ

Published:
Updated:

ಬೆಂಗಳೂರು: ಮಿಡ್‌ಫೀಲ್ಡರ್, ಕರ್ನಾಟಕದ ಎಸ್‌.ಕೆ. ಉತ್ತಪ್ಪ ಅವರು ಸುಲ್ತಾನ್‌ ಅಜ್ಲಾನ್ ಷಾ ಕಪ್ ಹಾಕಿಯ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಇಲ್ಲಿನ ಸಾಯ್‌ ಆವರಣದಲ್ಲಿ ಕೋಚ್ ಜೋರ್ಡ್‌ ಮ್ಯಾರಿಜ್‌ ಮಂಗಳವಾರ ತಂಡವನ್ನು ಪ್ರಕಟಿಸಿದರು.

ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್‌ ಅವರನ್ನು ವಾಪಸ್ ಕರೆಸಿಕೊಳ್ಳಲಾಗಿದ್ದು ಮನ್‌ದೀಪ್‌ಮೋರ್‌, ಸುಮಿತ್‌ ಕುಮಾರ್, ಶಿಲಾನಂದ್ ಲಾಕ್ರಾ ಅವರಿಗೆ ಸ್ಥಾನ ನೀಡಲಾಗಿದೆ. ಮಾರ್ಚ್‌ 3ರಿಂದ 10ರ ವರೆಗೆ ಮಲೇಷ್ಯಾದ ಇಪೋದಲ್ಲಿ ಟೂರ್ನಿ ನಡೆಯಲಿದೆ.

ತಂಡ

ಗೋಲ್‌ಕೀಪರ್‌ಗಳು: ಸೂರಜ್ ಕರ್ಕೇರಾ, ಕಿಶನ್‌ ಪಾಠಕ್‌. ಡಿಫೆಂಡರ್‌ಗಳು: ಅಮಿತ್ ರೋಹಿದಾಸ್‌, ದಿಪ್ಸನ್‌ ಟರ್ಕಿ, ವರುಣ್ ಕುಮಾರ್‌, ಸುರೇಂದರ್‌ ಕುಮಾರ್‌, ನೀಲಮ್‌ ಸಂಜೀವ್‌ ಕ್ಸೆಸ್‌, ಮನ್‌ದೀಪ್‌ ಮೋರ್‌. ಮಿಡ್‌ಫೀಲ್ಡರ್‌ಗಳು: ಎಸ್‌.ಕೆ.ಉತ್ತಪ್ಪ, ಸರ್ದಾರ್‌ ಸಿಂಗ್‌ (ನಾಯಕ), ಸುಮಿತ್‌, ನೀಲಕಂಠ ಶರ್ಮಾ, ಸಿಮ್ರಾನ್‌ಜೀತ್‌ ಸಿಂಗ್‌, ರಮನ್‌ದೀಪ್‌ ಸಿಂಗ್‌ (ಉಪನಾಯಕ), ತಲ್ವಿಂದರ್‌ ಸಿಂಗ್‌, ಸುಮಿತ್‌ ಹಾಗೂ ಶಿಲಾನಂದ್‌ ಲಾಕ್ರಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry