ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಘಟ್ಟ–ಮೈಸೂರು ಮಧ್ಯೆ 6 ಪಥದ ಹೆದ್ದಾರಿ

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ ಕೇಂದ್ರದ ಅನುಮೋದನೆ
Last Updated 20 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು–ಮೈಸೂರು ನಡುವಣ ರಾಷ್ಟ್ರೀಯ ಹೆದ್ದಾರಿಯನ್ನು (ಎನ್‌ಎಚ್‌–275) ಆರು ಪಥದ ಹೆದ್ದಾರಿಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಮಂಗಳವಾರ ಅನುಮೋದನೆ ನೀಡಿದೆ.

ಮದ್ದೂರು ಬಳಿಯ ನಿಡಘಟ್ಟದಿಂದ (ಬೆಂಗಳೂರಿನಿಂದ 74 ಕಿ.ಮೀ.) ಮೈಸೂರುವರೆಗಿನ 60.35 ಕಿ.ಮೀ ಉದ್ದದಷ್ಟು ಹೆದ್ದಾರಿಯನ್ನು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಈ ಹಂತದ ಯೋಜನೆಯ ವೆಚ್ಚ ₹ 2,919.81 ಕೋಟಿ.

‘ಯೋಜನೆಗೆ ಕೇಂದ್ರ ಸಚಿವ ಸಂಪುಟವು ಶೀಘ್ರವೇ ಅನುಮೋದನೆ ನೀಡಲಿದೆ. ಮುಂದಿನ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಮಗಾರಿಗೆ ಚಾಲನೆ ಶಿಲಾನ್ಯಾಸ ಮಾಡಲಿದ್ದಾರೆ’ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

₹ 2,919 ಕೋಟಿ – ಮೊದಲ ಹಂತದ ಯೋಜನಾ ವೆಚ್ಚ

₹ 2,028 ಕೋಟಿ – ಹೆದ್ದಾರಿ ನಿರ್ಮಾಣ ವೆಚ್ಚ

₹ 891 ಕೋಟಿ – ಭೂಸ್ವಾಧೀನ ಮತ್ತು ನಿರ್ಮಾಣ ಕಾಮಗಾರಿ ಪೂರ್ವತಯಾರಿ ವೆಚ್ಚ

***

ಸವಲತ್ತುಗಳು ಮತ್ತು ವಿನ್ಯಾಸ

ಆರು ಪಥದ ಹೆದ್ದಾರಿಯ ವಿನ್ಯಾಸ ಹೇಗಿರಬೇಕು ಮತ್ತು ಹೆದ್ದಾರಿಯಲ್ಲಿ ಯಾವೆಲ್ಲಾ ಸವಲತ್ತುಗಳು ಇರಬೇಕು ಎಂಬುದನ್ನು ಭಾರತೀಯ ರಸ್ತೆ ಕಾಂಗ್ರೆಸ್ ನಿಗದಿ ಮಾಡಿದೆ. ಅದರ ಅನ್ವಯವೇ ನಿಡಘಟ್ಟ–ಮೈಸೂರು ಹೆದ್ದಾರಿ ನಿರ್ಮಾಣವಾಗಲಿದೆ.

ಸವಲತ್ತುಗಳು

ಹೆದ್ದಾರಿ ಗಸ್ತು ವಾಹನ

ಹೆದ್ದಾರಿಯಲ್ಲಿ ಯಾವುದೇ ಅವಘಡಗಳು ಸಂಭವಿಸಿದಾಗ ಸಂಚಾರವನ್ನು ಸುಗಮಗೊಳಿಸಲು ಮತ್ತು ಮಂಜು ಕವಿದಿದ್ದ ಸಂದರ್ಭದಲ್ಲಿ ವಾಹನ ಚಾಲಕರಿಗೆ ಆ ಬಗ್ಗೆ ಎಚ್ಚರಿಕೆ ನೀಡಲು ಬಳಸಲಾಗುತ್ತದೆ

ಕ್ರೇನ್

ಅಪಘಾತಗಳ ಸಂದರ್ಭದಲ್ಲಿ ಮತ್ತು ಕೆಟ್ಟು ನಿಂತಾಗ ವಾಹನಗಳನ್ನು ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಸರಿಸಲು ಬಳಸಲಾಗುತ್ತದೆ

ಆಂಬುಲೆನ್ಸ್

ಅಪಘಾತಗಳ ಸಂದರ್ಭದಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಮತ್ತು ಆಸ್ಪತ್ರೆಗೆ ಸಾಗಿಸಲು ಬಳಕೆ. ಆಂಬುಲೆನ್ಸ್‌ ಇರುವ ಜಾಗದಿಂದ ಗರಿಷ್ಠ 10 ನಿಮಿಷದಷ್ಟು ಪ್ರಯಾಣದ ಅವಧಿಯ ದೂರವಷ್ಟೇ ಅದರ ಕಾರ್ಯವ್ಯಾಪ್ತಿಯಾಗಿರಬೇಕು

ಬಸ್‌ಬೇ–ನಿಲ್ದಾಣ

ಹೆದ್ದಾರಿಯ ಮೂರೂ ಪಥಗಳಿಂದ ಇದು ಬೇರ್ಪಟ್ಟಿರಬೇಕು. ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಬಸ್‌ಗಳನ್ನು ನಿಲ್ಲಿಸುವಷ್ಟು ಸ್ಥಳವಿರಬೇಕು

ವಿಶ್ರಾಂತಿ ಸ್ಥಳ

ಸರ್ವಿಸ್ ರಸ್ತೆಯಿಂದ ಹೊರಗೆ ಇರಬೇಕು. ಉಪಹಾರ ಮಂದಿರ/ಹೋಟೆಲ್ ಇರಬೇಕು ಮತ್ತು ಶೌಚಾಲಯದ ವ್ಯವಸ್ಥೆ ಇರಬೇಕು. ಇವನ್ನು ಹೊಸದಾಗಿ ಅಭಿವೃದ್ಧಿಪಡಿಸಬೇಕು. ಈಗಾಗಲೇ ಇರುವ ಹೋಟೆಲ್‌ಗಳನ್ನು ಹಾಗೇಯೇ ಉಳಿಸಿಕೊಂಡರೂ ಅವುಗಳನ್ನು, ಹೊಸ ಹೆದ್ದಾರಿ ಯೋಜನೆಯಲ್ಲಿ ವಿಶ್ರಾಂತಿ ಸ್ಥಳ ಎಂದು ಪರಿಗಣಿಸಬಾರದು

2 ಮೀಟರ್– ರಸ್ತೆಯ ಅಂಚು

2 ಮೀಟರ್– ಎತ್ತರಿಸಿದ ಪಾದಚಾರಿ ಮಾರ್ಗ

7 ಮೀಟರ್ – ಸರ್ವಿಸ್ ರಸ್ತೆಯ ಅಗಲ

2 ಸರ್ವೀಸ್ ರಸ್ತೆಯಲ್ಲಿರುವ ಪಥಗಳು

1 ಮೀಟರ್ ಸರ್ವೀಸ್ ರಸ್ತೆಯ ಒಳ ಅಂಚು

1.5 ಮೀಟರ್‌– ಮಳೆ ನೀರಿನ ಚರಂಡಿಯ ಅಗಲ

ತಡೆಗೋಡೆ

1 ಮೀಟರ್– ಹೆದ್ದಾರಿಯ ಹೊರ ಅಂಚು (ಕಾಂಕ್ರೀಟ್)

1 ಮೀಟರ್–  ಹೆದ್ದಾರಿಯ ಹೊರ ಅಂಚು (ಡಾಂಬರು)

10.5 ಮೀಟರ್– ಹೆದ್ದಾರಿಯ ಒಂದು ಬದಿಯ ಮೂರು ಪಥಗಳ ಒಟ್ಟು ಅಗಲ

3.5 ಮೀಟರ್– ಒಂದು ಪಥದ ಅಗಲ

1 ಮೀಟರ್– ಹೆದ್ದಾರಿಯ ಒಳ ಅಂಚು

4 ಮೀಟರ್– ಎತ್ತರಿಸಿದ ವಿಭಜಕದ ಅಗಲ

***

ಈ ಯೋಜನೆಯ ಕಾಮಗಾರಿಯಿಂದ ಆ ಭಾಗದಲ್ಲಿ ಒಟ್ಟು 2.48 ಲಕ್ಷ ಮಾನವ ದಿನಗಳಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ
– ನಿತಿನ್ ಗಡ್ಕರಿ, ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT