ಸೋಮವಾರ, ಡಿಸೆಂಬರ್ 9, 2019
21 °C

ಕ್ವಾರ್ಟರ್‌ನಲ್ಲಿ ಕರ್ನಾಟಕ–ಹೈದರಾಬಾದ್ ಪೈಪೋಟಿ

Published:
Updated:
ಕ್ವಾರ್ಟರ್‌ನಲ್ಲಿ ಕರ್ನಾಟಕ–ಹೈದರಾಬಾದ್ ಪೈಪೋಟಿ

ನವದೆಹಲಿ: ಕರ್ನಾಟಕ ಹಾಗೂ ಹೈದರಾಬಾದ್ ತಂಡಗಳು ಇಂದು ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಡಲಿವೆ.

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಕರ್ನಾಟಕ ತಂಡ ಸೆಮಿಫೈನಲ್‌ ಪ್ರವೇಶದ ಕನಸಿನೊಂದಿಗೆ ಕಣಕ್ಕಿಳಿಯಲಿದೆ. ‘ಎ’ ಗುಂಪಿನಲ್ಲಿ ಕರ್ನಾಟಕ 18 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡು ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.

ಗಾಯಗೊಂಡಿರುವ ವಿನಯ್ ಕುಮಾರ್ ವಿಶ್ರಾಂತಿ ಪಡೆಯಲಿದ್ದಾರೆ. ಭಾರತ ತಂಡದಲ್ಲಿ ಆಡಲಿರುವ ಕೆ.ಎಲ್‌.ರಾಹುಲ್ ಹಾಗೂ ಮನೀಷ್ ಪಾಂಡೆ ಕೂಡ ಕಣದಲ್ಲಿ ಇಲ್ಲ. ಆರ್‌.ಸಮರ್ಥ್, ಸಿ.ಎಮ್‌.ಗೌತಮ್‌, ಮಯಂಕ್‌ ಅಗರವಾಲ್‌ ಅವರ ಮೇಲೆ ವಿಶ್ವಾಸವಿದೆ.

ಪ್ರತಿಕ್ರಿಯಿಸಿ (+)