ಗುರುವಾರ , ಡಿಸೆಂಬರ್ 12, 2019
25 °C
ವಿಶೇಷ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಿಂದ ಆದೇಶ

ಗರ್ಭಿಣಿ ಕೊಲೆ: ಅಪರಾಧಿಗೆ ಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗರ್ಭಿಣಿ ಕೊಲೆ: ಅಪರಾಧಿಗೆ ಗಲ್ಲು

ಕುಂದಾಪುರ: 2015ರಲ್ಲಿ ನಡೆದಿದ್ದ ಪಡುಗೋಪಾಡಿ ಗರ್ಭಿಣಿ ಕೊಲೆ ಪ್ರಕರಣದ ಆರೋಪಿ ಪ್ರಶಾಂತ ಮೊಗವೀರ ಎಂಬಾತನಿಗೆ ವಿಶೇಷ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಗಲ್ಲು ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ನೀಡಿದ್ದಾರೆ.

ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮದ ಪಡುಗೋಪಾಡಿಯ ಇಂದಿರಾ ಮನೆಯಲ್ಲಿದ್ದ ಸಮಯ ನೋಡಿ ನೀರು ಕೇಳುವ ನೆಪದಲ್ಲಿ ಮನೆಗೆ ಬಂದಿದ್ದ ಆರೋಪಿ, ಆಕೆಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದ. ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಆತನ ಬಂಧನವಾಗಿತ್ತು. ಸಾಕ್ಷಿಗಳನ್ನು ನಾಶ ಮಾಡುವ ಸಂಬಂಧ ಆರೋಪಿ ಹಲವಾರು ಕತೆ ಕಟ್ಟಿದ್ದ. ಆರೋಪಿಗೆ ಶಿಕ್ಷೆ ನೀಡುವಂತೆ ಆ ವೇಳೆ ಪ್ರತಿಭಟನೆಗಳು ನಡೆದಿದ್ದವು. ಅಪಹರಣ, ಅತ್ಯಾಚಾರ ಆರೋಪಗಳಿಗೆ ತಲಾ 10 ವರ್ಷಗಳ ಕಠಿಣ ಶಿಕ್ಷೆ. ಭ್ರೂಣ ಹತ್ಯೆ ನಡೆಸಿದ್ದಕ್ಕಾಗಿ ಗಲ್ಲು ಶಿಕ್ಷೆ ವಿಧಿಸಲಾಯಿತು.

ಪ್ರತಿಕ್ರಿಯಿಸಿ (+)