ಅಗ್ನಿ 2 ಕ್ಷಿಪಣಿ ಪರೀಕ್ಷೆ ಯಶಸ್ವಿ

7

ಅಗ್ನಿ 2 ಕ್ಷಿಪಣಿ ಪರೀಕ್ಷೆ ಯಶಸ್ವಿ

Published:
Updated:

ಬಾಲೇಶ್ವರ, ಒಡಿಶಾ: ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸಾಮರ್ಥ್ಯದ ಅಗ್ನಿ–2 ಮಧ್ಯಮ ವ್ಯಾಪ್ತಿಯ ಕ್ಷಿಪಣಿಯನ್ನು ಇಲ್ಲಿನ ಅಬ್ದುಲ್ ಕಲಾಂ ದ್ವೀಪದಲ್ಲಿ ಮಂಗಳವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಚಿಮ್ಮುವ ಸಾಮರ್ಥ್ಯದ ಈ ಕ್ಷಿಪಣಿಯ ದಾಳಿ ವ್ಯಾಪ್ತಿ 2,000 ಕಿಲೋಮೀಟರ್‌.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಇ) ಸಹಕಾರದೊಂದಿಗೆ ಸೇನೆಯ ಯುದ್ಧತಂತ್ರ ವಿಭಾಗವು (ಎಸ್ಎಫ್‌ಸಿ) ಈ ಕಾರ್ಯಾಚರಣೆ ನಡೆಸಿತು.

ಇದು ಅತ್ಯಂತ ನಿಖರ ಮಾಹಿತಿ ನೀಡುವ ಪಥದರ್ಶಕ ವ್ಯವಸ್ಥೆ ಹಾಗೂ ಅತ್ಯಾಧುನಿಕ ನಿಯಂತ್ರಣ ವ್ಯವಸ್ಥೆಗಳನ್ನು ಹೊಂದಿದೆ.

ಇಡೀ ಪರೀಕ್ಷೆಯ ಮೇಲೆ ಅತ್ಯಾಧುನಿಕ ರಾಡಾರ್‌ಗಳು ಹಾಗೂ ಟೆಲಿಮೆಟ್ರಿ ವೀಕ್ಷಣಾ ಕೇಂದ್ರಗಳು ನಿಗಾ ಇಟ್ಟಿದ್ದವು. ಎಲೆಕ್ಟ್ರೋ ಆಪ್ಟಿಕ್ ಉಪಕರಣಗಳು ಹಾಗೂ ಎರಡು ಸೇನಾ ನೌಕೆಗಳನ್ನು ಬಂಗಾಳಕೊಲ್ಲಿಯ ಗುರಿಯ ಸಮೀಪ ನಿಯೋಜಿಸಲಾಗಿತ್ತು.

ಅಡ್ವಾನ್ಸ್ಡ್ ಸಿಸ್ಟಮ್ಸ್‌ ಲ್ಯಾಬೊರೇಟರಿ, ಡಿಆರ್‌ಡಿಒದ ಇತರ ಪ್ರಯೋಗಾಲಯಗಳು ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿವೆ. ಅಗ್ನಿ ಸರಣಿಯ ಭಾಗವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಹೀಗಿದೆ ಕ್ಷಿಪಣಿ..

20 ಮೀಟರ್ – ಕ್ಷಿಪಣಿಯ ಉದ್ದ

17 ಟನ್ –  ಕ್ಷಿಪಣಿಯ ತೂಕ

1000 ಕೆ.ಜಿ – ತೂಕ ಹೊತ್ತೊಯ್ಯುವ ಸಾಮರ್ಥ್ಯ

2,000 ಕಿ.ಮೀ. – ದಾಳಿ ವ್ಯಾಪ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry