ಬೀದರ್‌ನಲ್ಲಿ ಸಿಪೆಟ್: ಅನಂತಕುಮಾರ

7

ಬೀದರ್‌ನಲ್ಲಿ ಸಿಪೆಟ್: ಅನಂತಕುಮಾರ

Published:
Updated:

ಭಾಲ್ಕಿ (ಬೀದರ್‌ ಜಿಲ್ಲೆ): ‘ಬೀದರ್ ಜಿಲ್ಲೆಯಲ್ಲಿ ಕೇಂದ್ರೀಯ ಪ್ಲಾಸ್ಟಿಕ್ಸ್‌ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್) ಆರಂಭಿಸಲಾಗುವುದು’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ ಮಂಗಳವಾರ ಘೋಷಿಸಿದರು.

ಇಲ್ಲಿನ ಚನ್ನಬಸವಾಶ್ರಮದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಸಂಸ್ಥೆಗೆ ₹100 ಕೋಟಿ ಕೊಡಲಾಗುವುದು’ ಎಂದರು.

‘ಸಂಸ್ಥೆಯನ್ನು ಸ್ಥಾಪಿಸಲು 100 ಎಕರೆ ಜಾಗದ ಅಗತ್ಯವಿದೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ರಾಜ್ಯ ಸರ್ಕಾರ ತಕ್ಷಣವೇ 10 ಎಕರೆ ಹಾಗೂ ಪಾಳು ಬಿದ್ದ ಕಟ್ಟಡ ಕೊಟ್ಟರೂ ಸಂಸ್ಥೆಯನ್ನು ಪ್ರಾರಂಭಿಸಲಾಗುವುದು’ ಎಂದರು.

‘ಸಂಸ್ಥೆಯಲ್ಲಿ ಡಿಪ್ಲೊಮಾ, ಸ್ನಾತಕ, ಸ್ನಾತಕೋತ್ತರ ಪದವಿ ಪೂರೈಸಿದವರಿಗೆ ದೇಶ, ವಿದೇಶಗಳಲ್ಲಿ ಉದ್ಯೋಗಾ

ವಕಾಶ ದೊರೆಯಲಿವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry