22ರಿಂದ ಐಎಸ್‌ಎಚ್‌ ಇಂಡಿಯಾ ಮೇಳ

7

22ರಿಂದ ಐಎಸ್‌ಎಚ್‌ ಇಂಡಿಯಾ ಮೇಳ

Published:
Updated:

ಬೆಂಗಳೂರು: ಮೆಸ್ಸೆ ಫ್ರ್ಯಾಂಕ್‌ಫ್ರೂಟ್‌ ಮತ್ತು ಇಂಡಿಯನ್‌ ಪ್ಲಂಬಿಂಗ್‌ ಅಸೋಸಿಯೇಷನ್‌(ಐಪಿಎ) ಇದೇ 22ರಿಂದ 24ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಐಎಚ್‌ಎಸ್‌ ಮೇಳ ಆಯೋಜಿಸಿದೆ.

ದೇಶ ವಿದೇಶಗಳ 50ಕ್ಕೂ ಹೆಚ್ಚು ಸಂಸ್ಥೆಗಳು ಮೇಳದಲ್ಲಿ ಭಾಗಿಯಾಗಲಿವೆ. ಇದರಲ್ಲಿ ಭಾರತದ ನಗರಗಳಿಗೆ ಸೂಕ್ತವಾದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ನೀರಿನ ನಿರ್ವಹಣೆ, ಕೊಳವೆ ವ್ಯವಸ್ಥೆ, ನೀರನ್ನು ನವೀಕರಿಸಬಹುದಾದ ಮತ್ತು ನೈರ್ಮಲ್ಯ ನಿರ್ವಹಣೆಗೆ ಉನ್ನತ ದರ್ಜೆಯ ನೂತನ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು. ಬೆಳಿಗ್ಗೆ 11ರಿಂದ ಮೇಳ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry