ಬದಲಾವಣೆ ಬಯಸಿದ ಮತದಾರರು: ತಾತೋಜಿರಾವ್‌

7

ಬದಲಾವಣೆ ಬಯಸಿದ ಮತದಾರರು: ತಾತೋಜಿರಾವ್‌

Published:
Updated:

ಭದ್ರಾವತಿ:  ‘40 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿರುವ ನಾನು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಬಯಸುವುದರಲ್ಲಿ ತಪ್ಪೇನಿಲ್ಲ’ ಎಂದು ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಎಸ್. ತಾತೋಜಿರಾವ್ ಹೇಳಿದರು.

‘ಪಕ್ಷದ ತಾಲ್ಲೂಕು ಉಪಾಧ್ಯಕ್ಷನಾಗಿ ಕೆಲಸ ಮಾಡಿರುವ ನಾನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರ ಹಣದ ಹೋರಾಟದಿಂದ ಬೇಸತ್ತಿರುವ ಮತದಾರರು ಬದಲಾವಣೆ ಬಯಸಿ ಬಿಜೆಪಿ ಕಡೆಗೆ ಮನಸ್ಸು ಮಾಡುತ್ತಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೂ ಕಾರಣವಾಗಿದೆ’ ಎಂದು ತಿಳಿಸಿದರು.

ಮುಖಂಡರಾದ ಸತ್ಯನಾರಾಯಣರಾವ್ ಘೋರ್ಪಡೆ, ಲೋಕೇಶ್ವರಾವ್, ಕಾ.ರಾ. ನಾಗರಾಜ್, ಮಂಜುನಾಥರಾವ್, ರಾಮನಾಥ ಬರ್ಗೆ, ಆರ್. ಮಾರುತಿರಾವ್, ಜಾಫರ್, ಸಾದತ್ ಅಲಿಖಾನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry