ಮಂಗಳವಾರ, ಡಿಸೆಂಬರ್ 10, 2019
20 °C
ಫ್ಯಾಷನ್

ತಮಾಷೆಗೊಂದು ಫಿಶ್‌ಐ ಕ್ಯಾಮೆರಾ

Published:
Updated:
ತಮಾಷೆಗೊಂದು  ಫಿಶ್‌ಐ ಕ್ಯಾಮೆರಾ

ಬೇರೆ ಗ್ಯಾಜೆಟ್‌ಗಳಿಗೆ ಹೋಲಿಸಿದರೆ, ವಿನ್ಯಾಸದ ವಿಷಯದಲ್ಲಿ ಕ್ಯಾಮೆರಾವನ್ನು ಹೊಗಳು ವುದು ಕಡಿಮೆಯೇ. ಆದರೆ ಈ ಕ್ಯಾಮೆರಾ ಹಾಗಲ್ಲ. ಇದನ್ನು ನೋಡುತ್ತಿದ್ದರೆ ಗೊತ್ತೇ ಆಗದೆ ಮನಸ್ಸು ಬಣ್ಣನೆಗೆ ಇಳಿಯುತ್ತದೆ.

ಇದರ ಹೆಸರು ‘ಲೋಮೊಗ್ರಫಿ ಫಿಶ್ಐ ಬೇಬಿ’. ಆಟಿಕೆಯಂತೆ ಪುಟ್ಟದಾಗಿರುವ ಈ ಕ್ಯಾಮೆರಾಕ್ಕೆ ಇಂಬು ನೀಡಿರುವುದು ಬಣ್ಣಗಳು. ಫಿಶ್‌ಐ ಫೋಟೊಗ್ರಫಿಗೆಂದೇ ಈ ಕ್ಯಾಮೆರಾ ರೂಪಿತಗೊಂಡಿದೆ. ನೋಡಲು ಮುದ್ದಾಗಿದೆ ಮಾತ್ರವಲ್ಲ, ಫೋಟೊಗ್ರಫಿಯಲ್ಲಿ ಏನೇನು ತಮಾಷೆ ಸಾಧ್ಯವೋ ಅದನ್ನು ಇದರಲ್ಲಿ ಮಾಡಬಹುದು.

ಹಿಡಿಯಷ್ಟು ಇರುವ ಈ ಕ್ಯಾಮೆರಾ ಲೆನ್ಸ್ –170° ಫಿಶ್ ಐ. 110 ಫಿಲ್ಮ್‌ನೊಂದಿಗೆ ತುಂಬಾ ಚೆನ್ನಾಗಿಯೇ ಚಿತ್ರಗಳನ್ನು ಮೂಡಿಸುತ್ತದೆ. ಮಲ್ಟಿಪಲ್ ಎಕ್ಸ್‌ಪೋಷರ್ ಶಾಟ್‌ ಗಳನ್ನು ತೆಗೆಯಬಲ್ಲದ್ದಾಗಿದ್ದು, ಪಿಸಿ ಫ್ಲಾಶ್ ಕನೆಕ್ಟರ್ ಇದೆ. 1/100 (N), ಬಲ್ಬ್ (B), ಫೋಕಲ್ ಲೆಂತ್ 10 ಎಂಎಂ ಇದೆ. ಸದ್ಯಕ್ಕೆ ಸೀಮಿತ ಆವೃತ್ತಿ ಇದರದ್ದು. ಇದರ ಬೆಲೆ

₹ 2507.51

ಪ್ರತಿಕ್ರಿಯಿಸಿ (+)