ಮಂಗಳವಾರ, ಡಿಸೆಂಬರ್ 10, 2019
20 °C

ಕರಾವಳಿ ಕ್ರೀಡೆ ಕಂಬಳ ಬೆಂಬಲಿಸಿ ವಿರೇಂದ್ರ ಸೆಹ್ವಾಗ್‌ ಟ್ವೀಟ್‌: ಪರ ವಿರೋಧದ ಚರ್ಚೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಕರಾವಳಿ ಕ್ರೀಡೆ ಕಂಬಳ ಬೆಂಬಲಿಸಿ ವಿರೇಂದ್ರ ಸೆಹ್ವಾಗ್‌ ಟ್ವೀಟ್‌: ಪರ ವಿರೋಧದ ಚರ್ಚೆ

ನವದೆಹಲಿ: ಕರಾವಳಿ ಕ್ರೀಡೆ ಕಂಬಳ ಬೆಂಬಲಿಸಿ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಕಂಬಳಕ್ಕಿದ್ದ ಎಲ್ಲ ಅಡೆತಡೆಗಳು ಈಗ ಪೂರ್ಣಗೊಂಡಿದ್ದು, ಗ್ರಾಮೀಣ ಕ್ರೀಡೆಯನ್ನು ಉಳಿಸಬೇಕಾಗಿದೆ’ ಎಂದು ಸೆಹ್ವಾಗ್‌ ಸೋಮವಾರ ಟ್ವೀಟ್‌ ಮಾಡಿದ್ದರು.

ಟ್ವೀಟ್‌ನಲ್ಲಿ ಏನಿದೆ?

ಕಂಬಳದ ವಿಧೇಯಕಕ್ಕೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ್ದಾರೆ. ಕರ್ನಾಟಕದ ಕಾನೂನು ಬದ್ಧ ಗ್ರಾಮೀಣ ಕ್ರೀಡೆಯಾಗಿದೆ. ಯುವಜನರನ್ನು ಪುನಶ್ಚೇತನಗೊಳಿಸಲು ಇರುವ ಮಾರ್ಗಗಳನ್ನು ತಡೆಯಲು ಕೆಲ ಕಪಟ ಸಂಘಟನೆಗಳ ಪ್ರಯತ್ನಗಳಿಗೆ ಇದೀಗ ತಡೆಯಾಗಿದೆ’ ಎಂದು ಹೇಳಿದ್ದಾರೆ.

ಕರಾವಳಿ ಜಿಲ್ಲೆಗಳ ಜನಪ್ರಿಯ ಕ್ರೀಡೆಯಾದ ಕಂಬಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ವಿಧಾನಸಭೆಯು ಕಳೆದ ನವೆಂಬರ್‌ 17ರಂದು ಅಂಗೀಕರಿಸಿದ್ದ ಪ್ರಾಣಿ ಹಿಂಸೆ ತಡೆ (ತಿದ್ದುಪಡಿ) ಮಸೂದೆ– 2017ಕ್ಕೆ ರಾಷ್ಟ್ರಪತಿಯವರ ಅಂಕಿತ ದೊರೆತಿದೆ.

ಫೆಬ್ರುವರಿ 10ರಂದು ತಿದ್ದುಪಡಿ ಮಸೂದೆಗೂ ರಾಷ್ಟ್ರಪತಿಯವರು ಅಂಕಿತ ದೊರೆತಿದೆ. ಸೋಮವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಕೇಂದ್ರದ ಗೃಹ ಸಚಿವಾಲಯವು ಇದನ್ನು ಖಚಿತಪಡಿಸಿದೆ.

*

‘ಇತರರು ಮನರಂಜನೆಗೋಸ್ಕರ ನಿಮ್ಮನು ಹೊಡೆದು ಸೋಲಿಸಿದರೆ. ಆಗ ಅದರ ನೋವಿನ ಅನುಭವ ನಿಮಗೆ ತಿಳಿಸಿಯುತ್ತದೆ. ಜನರ ತಮ್ಮ ಮನರಂಜನೆಗೋಸ್ಕರ ತಾವು ಇಷ್ಟಪಡುವ ಏನನ್ನಾದರೂ ದುರ್ಬಳಕೆ ಮಾಡಿಕೊಳ್ಳುವ ಹಕ್ಕನ್ನು ಹೊಂದಿಲ್ಲ’ ಎಂದು ನಿಲೇ ಗಡಿಯಾ ಟ್ವೀಟ್‌ ಮಾಡಿದ್ದಾರೆ.

*

ಕಂಬಳ ಕ್ರೀಡೆ ಒಂದು ವಿನೋದವಲ್ಲ. ಇದು ನಮ್ಮ ಸಂಸ್ಕೃತಿ. ನಿಮಗೆ ಇದರ ಬಗ್ಗೆ ಗೊತ್ತಿಲ್ಲದಿದ್ದರೆ, ಮಂಗಳೂರಿಗೆ ಬರಲು ಮುಕ್ತವಾಗಿರಿ. ಎಂದು ಶರತ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

 

ಕೆಲವರು ಕನ್ನಡಿಗರ ಪರ ಮಾತನಾಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

*

*

ಪ್ರತಿಕ್ರಿಯಿಸಿ (+)