ಮಂಗಳವಾರ, ಡಿಸೆಂಬರ್ 10, 2019
20 °C

ರಾಜಕೀಯ ವಿಡಂಬನೆಯ ‘ಇಟ್ಸ್ ದಿ ಲಾ’

Published:
Updated:
ರಾಜಕೀಯ ವಿಡಂಬನೆಯ ‘ಇಟ್ಸ್ ದಿ ಲಾ’

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಈಗ ದಶಕದ ಸಂಭ್ರಮ. ಸಿನಿಮಾಗಳನ್ನು ಈಗಿನಷ್ಟು ಸುಲಭವಾಗಿ ನೋಡಲಾಗದ ಕಾಲದಲ್ಲಿ ಆರಂಭವಾದ ಈ ಸಿನಿಮೋತ್ಸವ, ಸಿನಿಮಾ ವಿದ್ಯಾರ್ಥಿಗಳು ಮತ್ತು ನಿರ್ದೇಶಕರ ಯೋಚನೆಯ ವಿಸ್ತರಣಾ ತಾಣವಾಗಿದೆ. ಈ ಬಾರಿಯ ಸಿನಿಮೋತ್ಸವದಲ್ಲಿ ನಾನು ಜ್ಯೂರಿಯಾಗಿರುವುದು ಖುಷಿಯಾಗಿದೆ. ಇಲ್ಲಿಗೆ ಬರುವ ಎಲ್ಲಾ ಸಿನಿಮಾಗಳು ಉತ್ಕೃಷ್ಟ ಮಟ್ಟದವೇ ಆಗಿರುತ್ತವೆ. ಅದರಲ್ಲಿ ಇನ್ನಷ್ಟು ಉತ್ತಮ ಸಿನಿಮಾ ಯಾವುದು ಎಂದು ನಿರ್ದೇಶಕಿಯಾಗಿ ನನಗೆ ಹೇಳುವುದು ನಿಜಕ್ಕೂ ಕಷ್ಟ.

ಈ ಬಾರಿಯ ಸಿನಿಮಾಗಳಲ್ಲಿ ಗಡಿನಾಡ ಸಮಸ್ಯೆ, ಆಂತರಿಕ ಕಲಹ, ಮಹಿಳಾ ಸಬಲೀಕರಣ, ಮಕ್ಕಳ ಹಕ್ಕುಗಳು ಹೀಗೆ ಹಲವು ವಿಷಯಗಳ ಕುರಿತು ಬೆಳಕು ಚೆಲ್ಲಲಾಗುತ್ತಿದೆ. ‘ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ’ ಎನ್ನುವ ಸಿನಿಮೋತ್ಸವದ ಉದ್ದೇಶದ ಚಿತ್ರಗಳ ಪ್ರದರ್ಶನ ಈ ಬಾರಿಯ ವೈಶಿಷ್ಟ್ಯ.

ಉತ್ಸವದ ಮೊದಲ ಮತ್ತು ಕೊನೆಯ ದಿನ ಪ್ರದರ್ಶನವಾಗಲಿರುವ ವಿದೇಶಿ ಭಾಷೆಯ ಎರಡು ಚಿತ್ರಗಳು ನನ್ನ ಮನಸಿಗೆ ತುಂಬಾ ಹಿಡಿಸಿದವು. ಅದರಲ್ಲೂ

‘ಇಟ್ಸ್‌ ದಿ ಲಾ’ (ಇಟಲಿ, ನಿರ್ದೇಶನ: ಸಾಲ್ವಟೋರ್ ಫಿಕಾರಾ, ವೆಲೆಂಟಿನೊ ಪಿಕೋನ್) ಚಿತ್ರವಂತೂ ದೇಶದ ಪ್ರಸಕ್ತ ರಾಜಕೀಯ ಸ್ಥಿತಿಗೆ ಪ್ರತಿಬಿಂಬದಂತಿದೆ. ಇಟಲಿಯ ಸಣ್ಣ ಪಟ್ಟಣದ ಕತೆಯಿದು. ಭ್ರಷ್ಟಾಚಾರದಲ್ಲಿ ಮುಳುಗಿರುವ ಸ್ಥಳೀಯ ಆಡಳಿತ ಜನರ ಕೆಂಗೆಣ್ಣಿಗೆ ತುತ್ತಾಗಿದೆ. ಅಂಥ ಸಮಯದಲ್ಲಿ ಮೃದು ಮನಸಿನ ಪ್ರಾಮಾಣಿಕ ಪ್ರಾಧ್ಯಾಪಕನೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುತ್ತಾನೆ. ಕಾನೂನಿನ ಪ್ರಕಾರ ಸ್ವಚ್ಛ ಆಡಳಿತ ನಡೆಸುವ ಅವನ ಕಾರ್ಯವೈಖರಿಗೆ ಆರಂಭದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ನಂತರದ ದಿನಗಳಲ್ಲಿ ಜನರ ನಿರ್ಧಾರ ಹೇಗೆ ಬದಲಾಗುತ್ತದೆ ಎಂಬ ವಾಸ್ತವ ಕಥಾನಕವನ್ನು ಈ ಸಿನಿಮಾ ಹೊಂದಿದೆ. ಇಟಲಿ ಭಾಷೆ, ಅಲ್ಲಿನ ಜನಜೀವನ, ಉಡುಪು ಇವಿಷ್ಟನ್ನೂ ತೆಗೆದಿಟ್ಟುಬಿಟ್ಟರೆ ಈ ಸಿನಿಮಾ ಪಕ್ಕಾ ಭಾರತೀಯ ಸಿನಿಮಾವೆಂದೇ ಹೇಳಬಹುದು. ಈ ಚಿತ್ರದ ಕಥೆ ನಮ್ಮ ದೇಶಕ್ಕೆ ಅಷ್ಟೊಂದು ಹೊಂದುತ್ತದೆ.

ಈ ಹೊತ್ತಿನ ಜನರ ಮನೋಭಾವವನ್ನು ಅದ್ಭುತವಾಗಿ ತೆರೆದಿಡುವ ಸಿನಿಮಾ ಇದು. ವ್ಯವಸ್ಥೆಯನ್ನು ಸರಿಮಾಡಲು ಬಂದವನು ಅಂತಿಮವಾಗಿ ಅದೇ ವ್ಯವಸ್ಥೆಗೆ ಹೇಗೆ ಬಲಿಯಾಗುತ್ತಾನೆ ಎಂಬುದನ್ನು ನಿರ್ದೇಶಕರು ವಿಡಂಬನಾತ್ಮಕವಾಗಿ ತೋರಿಸಿದ್ದಾರೆ. ಜನಪ್ರತಿನಿಧಿಗಳು ಮತ್ತು ಸಿನಿಪ್ರಿಯರು ನೋಡಲೇಬೇಕಾದ ಸಿನಿಮಾವಿದು. ಈ ಕ್ಷಣದ ಪ್ರಸಕ್ತ ರಾಜಕೀಯಕ್ಕೆ ‘ಇಟ್ಸ್ ದಿ ಲಾ’ ಕನ್ನಡಿ ಹಿಡಿಯುತ್ತದೆ.

‘ಸಿನಿಮೋತ್ಸವದ ಮುಕ್ತಾಯದ ದಿನ ಪ್ರದರ್ಶನವಾಗಲಿರುವ ‘ಲಾಸ್ಟ್ ಚೈಲ್ಡ್‌’ ಸಿನಿಮಾ ಮನುಷ್ಯ ಸಂಬಂಧಗಳ ಸುತ್ತ ಗಿರಕಿ ಹೊಡೆಯುತ್ತದೆ. ⇒ 2ನೇ ಪುಟ ನೋಡಿ

ಪ್ರತಿಕ್ರಿಯಿಸಿ (+)