ಬುಧವಾರ, ಡಿಸೆಂಬರ್ 11, 2019
20 °C

ಹಪ್ಪಳ ಮಾರುತ್ತಿರುವ ಹೃತಿಕ್‌

Published:
Updated:
ಹಪ್ಪಳ ಮಾರುತ್ತಿರುವ ಹೃತಿಕ್‌

ಹೃತಿಕ್‌ ರೋಶನ್‌ ಹೊಸ ಕಾಯಕದಲ್ಲಿ ತೊಡಗಿದ್ದಾರೆ. ಹಪ್ಪಳ ಮಾರುತ್ತಿರುವ ಇವರು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದಾರೆ. ಹೀಗೆ ಇವರು ಜೈಪುರದ ಗಲ್ಲಿಗಳಲ್ಲಿ ಸುತ್ತುತ್ತಿರುವುದು ಸಿನಿಮಾದ ಪಾತ್ರವಾಗಿ.

ಬಾಲಿವುಡ್‌ನ ಸೂಪರ್‌ ಹೀರೊ ಹೃತಿಕ್‌ ರೋಶನ್‌ ಸಿನಿಮಾ ಬದುಕಿನ ಪ್ರಾರಂಭದಿಂದಲೂ ವಿಭಿನ್ನ ಪಾತ್ರಗಳ ಮೂಲಕ ನಟನೆಗೇ ಹೆಚ್ಚು ಒತ್ತು ನೀಡಿದವರು. ಈಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ತೆರೆಗೆ ಬರಲು ಸಿದ್ಧವಾಗಿದ್ದಾರೆ. ‘ಸೂಪರ್‌ 30’ ಸಿನಿಮಾದ ಮತ್ತೊಂದು ಪೋಸ್ಟರ್‌ ಬಿಡುಗಡೆಯಾಗಿದ್ದು, ಇದರಲ್ಲಿ ಹೃತಿಕ್‌ ಹಳೆ ಬಟ್ಟೆ, ಶೇವಿಂಗ್‌ ಮಾಡದ ಮುಖದಲ್ಲಿ ಸೈಕಲ್‌ ಏರಿ ಹಪ್ಪಳ ಮಾರುತ್ತಿದ್ದಾರೆ.

ಈ ಚಿತ್ರವನ್ನು ಥಟ್ಟನೆ ನೋಡಿದಾಗ ಇದು ಹೃತಿಕ್‌ ಹೌದೇ ಎನ್ನುವ ಅನುಮಾನ ಮೂಡುತ್ತದೆ. ಬಿಹಾರದ ಗಣಿತಜ್ಞ ಆನಂದ್‌ ಕುಮಾರ್‌ ಅವರ ಪಾತ್ರದಲ್ಲಿ ಹೃತಿಕ್‌ ಮಿಂಚಲಿದ್ದಾರೆ. ಸಿನಿಮಾ 2019ರ ಜನವರಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.⇒v

ಪ್ರತಿಕ್ರಿಯಿಸಿ (+)