ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ದೋಷ – ಡ್ರೋನ್‌ ಪತನ

Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ): ಕುದಾಪುರದ ಡಿಆರ್‌ಡಿಒ ಪರೀಕ್ಷಾ ನೆಲೆಯ ಸುತ್ತ ಪರಿವೀಕ್ಷಣೆಗೆ ಹಾರಾಟ ನಡೆಸುತ್ತಿದ್ದ ಡ್ರೋನ್‌ ಲಘು ವಿಮಾನ, ಹೋಬಳಿಯ ದೊರೆಗಳಹಟ್ಟಿ ಗ್ರಾಮದ ರೈತರ ಜಮೀನಿನಲ್ಲಿ ನೆಲಕ್ಕುರುಳಿದೆ.

ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿರುವ ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಘಟಕದ ಹೊರಭಾಗದಿಂದ 3 ಕಿ.ಮೀ. ದೂರದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಹಾರಾಟ ನಡೆಸುತ್ತಿದ್ದ ಡ್ರೋನ್‌, ದೊರೆಗಳಹಟ್ಟಿ ಗ್ರಾಮದ ಬಂಗಾರಪ್ಪ ಅವರಿಗೆ ಸೇರಿದ ರಾಗಿಹೊಲದಲ್ಲಿ ಉರುಳಿದೆ. ಸುಮಾರು 7 ಅಡಿ ಉದ್ದ ಮತ್ತು 8 ಕೆ.ಜಿ. ತೂಕದ ಈ ವಿಮಾನ ಇದಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಡಿಆರ್‌ಡಿಒ ವಿಜ್ಞಾನಿಗಳ ತಂಡ ಪರೀಶೀಲನೆ ನಡೆಸಿತು. ಈ ವೇಳೆ ಮಾತನಾಡಿದ ವಿಜ್ಞಾನಿಯೊಬ್ಬರು, ‘ಇದೊಂದು ಸಣ್ಣ ಗಾತ್ರದ ಸಾಧನ. ಡಿಆರ್‌ಡಿಒ ಆವರಣದಲ್ಲಿ ಪ್ರಯೋಗಗಳನ್ನು ಮಾಡುವಾಗ ಈ ಪುಟ್ಟ ಡ್ರೋನ್, ಕೇಂದ್ರದ ತಂತ್ರಜ್ಞರ ನಿಯಂತ್ರಣವನ್ನು ಮೀರಿದೆ’ ಎಂದರು.

‘ಡ್ರೋನ್’ ವಿಮಾನವನ್ನು ತಂಡ ಡಿಆರ್‌ಡಿಒ ಕಚೇರಿಗೆ ತೆಗೆದುಕೊಂಡು ಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT