ಗುರುವಾರ , ಡಿಸೆಂಬರ್ 12, 2019
24 °C
26ರಿಂದ ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ

28ರಂದು ‘ಸ್ನೇಹ ಬಂಧನ ಧರ್ಮ ಸಂಗಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

28ರಂದು ‘ಸ್ನೇಹ ಬಂಧನ ಧರ್ಮ ಸಂಗಮ’

ರಂಭಾಪುರಿ ಪೀಠ (ಬಾಳೆಹೊನ್ನೂರು): ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಇದೇ 28ರಂದು ‘ಸ್ನೇಹ ಬಂಧನ ಧರ್ಮ ಸಂಗಮ’ ನಡೆಯಲಿದೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ಡಾ.ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

‘ಇಲ್ಲಿನ ರಂಭಾಪುರಿ ಪೀಠದಲ್ಲಿ ಇದೇ 26ರಿಂದ ಮಾರ್ಚ್ 2ರವರೆಗೆ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ ವಿಶಿಷ್ಟವಾಗಿ ನಡೆಯಲಿದೆ’ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿಎಂದರು.

‘ಸ್ನೇಹ ಬಂಧನ ಧರ್ಮ ಸಂಗಮ’ ಕಾರ್ಯಕ್ರಮವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಉದ್ಘಾಟಸಲಿದ್ದಾರೆ. ಹೊಸಪೇಟೆಯ ಕೊಟ್ಟೂರು ಸ್ವಾಮಿ ಮಠದ ಮದ್ವೀರಶೈವ ಶಿವಯೋಗ ಮಂದಿರ ಧರ್ಮ ಸಂಸ್ಥೆಯ ಅಧ್ಯಕ್ಷ ಡಾ.ಸಂಗನ ಬಸವ ಸ್ವಾಮಿಗಳಿಗಳಿಗೆ ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವೀರಶೈವ-ಲಿಂಗಾಯತ ಧರ್ಮ ಸಾಮರಸ್ಯ-ಸಂಘಟನೆ-ಸಂವರ್ಧನೆಗೆ ಈ ಧರ್ಮ ಸಮಾರಂಭ ಸಾಕ್ಷಿಯಾಗಲಿದೆ ಎಂದರು.

ಪ್ರತಿಕ್ರಿಯಿಸಿ (+)