ಮಂಗಳವಾರ, ಡಿಸೆಂಬರ್ 10, 2019
19 °C

ದೇವೇಗೌಡರ ಹಂಗಿನಲ್ಲಿ ಬೆಳೆದಿಲ್ಲ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವೇಗೌಡರ ಹಂಗಿನಲ್ಲಿ ಬೆಳೆದಿಲ್ಲ: ಸಿ.ಎಂ

ಬೆಂಗಳೂರು: ‘ಸ್ವಂತ ಸಾಮರ್ಥ್ಯದಿಂದ ರಾಜಕೀಯದಲ್ಲಿ ಬೆಳೆದಿದ್ದೇನೆಯೇ ಹೊರತು, ಎಚ್‌.ಡಿ.ದೇವೇಗೌಡರ ಹಂಗಿನಲ್ಲಿ ಬೆಳೆದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಾಸಕರ ಭವನದಲ್ಲಿ ಹೊಸದಾಗಿ ನಿರ್ಮಿಸಿರುವ ಕಟ್ಟಡಗಳ ಉದ್ಘಾಟನೆ ಬಳಿಕ ವಿಧಾನಪರಿಷತ್‌ ಸಭಾಪತಿ, ವಿಧಾನಸಭಾಧ್ಯಕ್ಷರು ಮತ್ತು ಜೆಡಿಎಸ್‌ ಶಾಸಕರ ಜೊತೆ ಲೋಕಾಭಿರಾಮವಾಗಿ ಮಾತನಾಡುವಾಗ ಈ ವಿಷಯ ತಿಳಿಸಿದರೆಂದು ಮೂಲಗಳು ಹೇಳಿವೆ.

‘ಮೊದಲ ಬಾರಿ ನನ್ನನ್ನು ಮಂತ್ರಿ ಮಾಡಿದವರು ರಾಮಕೃಷ್ಣ ಹೆಗಡೆ. ದೇವೇಗೌಡರಿಗೆ ಹೆಗಡೆ ಜತೆಗಿನ ಬಾಂಧವ್ಯ ಹಳಸಿದ ಮೇಲೆ ದೇವೇಗೌಡರು ನನ್ನನ್ನು ಕರೆದುಕೊಂಡರು. ನನ್ನನ್ನು ಹೆಗಡೆ ಬೆಳೆಸಿದ್ದೇ ಹೊರತು ದೇವೇಗೌಡರಲ್ಲ. 1983 ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆ ಆದಾಗ ದೇವೇಗೌಡರು ಎಂದರೆ ಯಾರು ಎಂಬುದೇ ಗೊತ್ತಿರಲಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ನ ಶ್ರೀಕಂಠೇಗೌಡ, ಬಸವರಾಜ ಹೊರಟ್ಟಿ ಇದ್ದರು.

ಪ್ರತಿಕ್ರಿಯಿಸಿ (+)