ಬುಧವಾರ, ಡಿಸೆಂಬರ್ 11, 2019
16 °C

ಅಸ್ಸಾಂ ಪ್ರವಾಸೋದ್ಯಮ ಕ್ಯಾಲೆಂಡರ್‌ : ಪ್ರಿಯಾಂಕಾ ದಿರಿಸಿಗೆ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ಸಾಂ ಪ್ರವಾಸೋದ್ಯಮ ಕ್ಯಾಲೆಂಡರ್‌ :  ಪ್ರಿಯಾಂಕಾ ದಿರಿಸಿಗೆ ಆಕ್ಷೇಪ

ಗುವಾಹಟಿ: ಅಸ್ಸಾಂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ(ಎಟಿಡಿಸಿ) ಕ್ಯಾಲೆಂಡರ್‌ನಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಪಾಶ್ಚಿಮಾತ್ಯ ದಿರಿಸು ಧರಿಸಿರುವ ಚಿತ್ರವನ್ನು ಪ್ರಕಟಿಸಿರುವುದು ವಿವಾದಕ್ಕೆ ಕಾರಣವಾಗಿದೆ.

‘ಪ್ರಿಯಾಂಕಾ ಅವರು ಅಸ್ಸಾಂನ ಸಾಂಪ್ರದಾಯಿಕ ಉಡುಪು ಧರಿಸದೇ ಫ್ರಾಕ್‌ ಧರಿಸಿರುವುದು ಸರಿಯಲ್ಲ’ ಎಂದು ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಪ್ರವಾಸೋದ್ಯಮ ಇಲಾಖೆಯ ಪ್ರಚಾರ ರಾಯಭಾರಿ ಸ್ಥಾನದಿಂದ ಪ್ರಿಯಾಂಕಾ ಚೋಪ್ರಾ ಅವರನ್ನು ತೆರವುಗೊಳಿಸಬೇಕು’ ಎಂದೂ ಆಗ್ರಹಿಸಿದ್ದಾರೆ.

ಕ್ಯಾಲೆಂಡರ್‌ನಲ್ಲಿ  ಪ್ರಿಯಾಂಕಾ ಚೋಪ್ರಾ ಚಿತ್ರ ಬಳಸಿರುವುದನ್ನು ಪ್ರವಾಸೋದ್ಯಮ ಸಚಿವ ಹಿಮಾಂತ ಬಿಸ್ವ ಶರ್ಮಾ ಸಮರ್ಥಿಸಿಕೊಂಡಿದ್ದಾರೆ.

‘ಕಾಂಗ್ರೆಸ್‌ನವರು ಈ ವಿಚಾರವಾಗಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)